ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಮತ್ತಿಪುರ ಸರ್ಕಾರಿ ಶಾಲೆಯನ್ನು ಅತಿಕ್ರಮಿಸಿ ಕೋಳಿಫಾರಂ ಮಾಡಲಾಗಿತ್ತು.
ಕೋಳಿಫಾರಂ ಆಗಿ ಮಾರ್ಪಟ್ಟಿದ್ದ ಸರ್ಕಾರಿ ಶಾಲೆಯ ಕುರಿತು ಈಟಿವಿ ಭಾರತ ದಲ್ಲಿ ಆಗಸ್ಟ್ 24ರಂದು ವರದಿ ಮಾಡಿದ ಬೆನ್ನಲ್ಲೇ, ಅತಿಕ್ರಮ ತೆರವುಗೊಳಿಸಿ, ಸ್ವಚ್ಛಗೊಳಿಸಲಾಗಿದೆ.
ದುರ್ನಾತ ಬೀರುತ್ತಿದ್ದ ಸರ್ಕಾರಿ ಶಾಲೆಗೆ ಇಂದು ಕೊಳ್ಳೇಗಾಲ ಬಿಇಒ ಹಾಗೂ ಪೊಲೀಸರು ಭೇಟಿ ನೀಡಿದರು. ಅತಿಕ್ರಮಣಕ್ಕೆ ಮುಂದಾಗಿದ್ದ ಕುಳ್ಳೇಗೌಡ ಎಂಬಾತನಿಗೆ ಬುದ್ಧಿ ಹೇಳಿ, ಶಾಲೆಯ ಆವರಣ, ಕೊಠಡಿಗಳನ್ನು ಸ್ವಚ್ಚಗೊಳಿಸಲಾಯಿತು.
ಶಾಲೆಯ ಕೊಠಡಿಗೆ ಬೀಗ ಹಾಕಿ, ಶಾಲೆಯ ಮುಖ್ಯಶಿಕ್ಷಕರಿಗೆ ಜವಾಬ್ದಾರಿ ಒಪ್ಪಿಸಲಾಯಿತು. ಶಾಲೆಯಲ್ಲಿ ಕೋಳಿ ಸಾಕಣೆ, ದವಸ- ಧಾನ್ಯಗಳ ದಾಸ್ತಾನು ಕುರಿತು ಈಟಿವಿ ಭಾರತ ಮೊದಲು ವರದಿ ಮಾಡಿದ್ದು, ಶಿಕ್ಷಣ ಇಲಾಖೆಯ ಗಮನ ಸೆಳೆದಿದೆ.