ETV Bharat / state

ಕಾಡಾನೆ ಜತೆ ಸೇರಿಕೊಂಡ ಬಂಡೀಪುರದ ಸಾಕಾನೆ : ಶಿಬಿರದಿಂದ ಮೂರನೇ ಬಾರಿ ಕಾಲ್ಕಿತ್ತ ಭಾಸ್ಕರ - ಬಂಡೀಪುರ ಉದ್ಯಾನದಿಂದ ಸಾಕಾನೆ ಭಾಸ್ಕರ ಪರಾರಿ

ಕಳೆದ 3 ತಿಂಗಳುಗಳ ಹಿಂದೆ ಅರಣ್ಯಕ್ಕೆ ಮೇಯಲು ಬಿಟ್ಟಿದ್ದ ವೇಳೆ ಕಾಡಾನೆಗಳೊಟ್ಟಿಗೆ ಭಾಸ್ಕರ ಸೇರಿಕೊಂಡಿದ್ದಾನೆ. ಮಾವುತರನ್ನು ಕಂಡರೆ ಆನೆ ಓಡಿ ಹೋಗುತ್ತಿದೆ. ಸದ್ಯ ಇಲಾಖೆ ನಿಗಾದಲ್ಲೇ ಇದೆ..

Elephant Baskara Escaped From Bandipur National Park
ಬಂಡೀಪುರ ಶಿಬಿರದಿಂದ ಸಾಕಾನೆ ಭಾಸ್ಕರ ಪರಾರಿ
author img

By

Published : Feb 2, 2022, 3:50 PM IST

ಚಾಮರಾಜನಗರ : ಬಂಡೀಪುರದ ಸಾಕಾನೆಯೊಂದು ಕಳೆದ 3 ತಿಂಗಳಿಂದ ಕಾಡಾನೆಗಳ ಜೊತೆಯೇ ಇದ್ದು ಶಿಬಿರದಿಂದ ದೂರ ಇರುವ ಮನೋಪ್ರವೃತ್ತಿ ಹೊರ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ರಾಂಪುರ ಆನೆ ಶಿಬಿರದಿಂದ ಮೂರನೇ ಬಾರಿಗೆ ಭಾಸ್ಕರ ಎಂಬ 10 ವರ್ಷದ ಗಂಡಾನೆಯೊಂದು ಪರಾರಿಯಾಗಿದೆ. ಕಾಡಾನೆಗಳೊಟ್ಟಿಗೆ ಸೇರಿಕೊಂಡಿದ್ದು, ಕಾಡಲ್ಲೇ ಸ್ವಚ್ಛಂದವಾಗಿ ವಿಹರಿಸುತ್ತಿದ್ದಾನೆ.

ಕಳೆದ 3 ತಿಂಗಳುಗಳ ಹಿಂದೆ ಅರಣ್ಯಕ್ಕೆ ಮೇಯಲು ಬಿಟ್ಟಿದ್ದ ವೇಳೆ ಕಾಡಾನೆಗಳೊಟ್ಟಿಗೆ ಭಾಸ್ಕರ ಸೇರಿಕೊಂಡಿದ್ದಾನೆ. ಮಾವುತರನ್ನು ಕಂಡರೆ ಆನೆ ಓಡಿ ಹೋಗುತ್ತಿದೆ. ಸದ್ಯ ಇಲಾಖೆ ನಿಗಾದಲ್ಲೇ ಇದೆ. ಅರವಳಿಕೆ ನೀಡಿ ಆನೆಯನ್ನು ಕರೆತರಲು ಅನುಮತಿ ಕೇಳಲಾಗಿದೆ. ಇನ್ನು ಅನುಮತಿ ಸಿಕ್ಕಿಲ್ಲ ಎಂದು ಬಂಡೀಪುರ ಎಸಿಎಫ್ ರವಿಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ಘಟನೆ: ಮನೆ ಕಾಂಪೌಂಡ್​ನಲ್ಲೇ ಶವ ಸಂಸ್ಕಾರ, ಸ್ಥಳೀಯರಿಂದ ಭಾರಿ ವಿರೋಧ- ಕಲ್ಲು ತೂರಾಟ!

ಈ ಹಿಂದೆಯೂ ಭಾಸ್ಕರ ಎರಡು ಬಾರಿ ಶಿಬಿರದಿಂದ ಕಾಲ್ಕಿತ್ತು. ಕಾಡಾನೆಗಳೊಟ್ಟಿಗೆ ಸೇರಿಕೊಂಡಿದ್ದ ವೇಳೆ ನಾಗರಹೊಳೆಯಿಂದ ಒಮ್ಮೆ ಮತ್ತು ಕೇರಳದಿಂದ ಕರೆತರಲಾಗಿತ್ತು‌.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.