ಚಾಮರಾಜನಗರ: ತಾಲೂಕಿನ ದಡದಹಳ್ಳಿ, ಬಸವನಪುರ ಗ್ರಾಮಗಳಲ್ಲಿ ಇಂದು ರಾತ್ರಿ 8ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ಮನೆಗಳಿಂದ ಜನರು ಹೊರ ಓಡಿ ಬಂದು ರಸ್ತೆಗಳಲ್ಲಿ ನಿಂತಿದ್ದಾರೆ. ಏಕಾಏಕಿ ಬಾರಿ ಶಬ್ಧ ಉಂಟಾಗಿರುವ ಹಿನ್ನೆಲೆ ಗಾಬರಿಗೊಂಡ ಜನರು ಮನೆಗಳಿಂದ ಹೊರ ಓಡಿ ಬಂದಿದ್ದಾರೆ. ಇನ್ನು ಈ ಬಗ್ಗೆ ಜಿಲ್ಲಾಡಳಿತ ಯಾವುದೇ ಮಾಹಿತಿ ನೀಡಿಲ್ಲ ಮತ್ತು ಭೂಕಂಪನದ ಬಗ್ಗೆ ಖಚಿತಪಡಿಸಿಲ್ಲ.
ಇದನ್ನೂ ಓದಿ: ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಭೂಕಂಪನ: ವಿಚಿತ್ರ ಸದ್ದು ಕೇಳಿದ ಅನುಭವ, ಬೆಚ್ಚಿಬಿದ್ದ ಜನ