ಚಾಮರಾಜನಗರ: ಡಾ.ರಾಜ್ ಕುಮಾರ್ ಅವರ ಸಹೋದರಿ, ದೊಡ್ಮನೆಯ ಹಿರಿಯ ಕೊಂಡಿಯಾದ ನಾಗಮ್ಮ ಅವರಿಗೆ ಪುನೀತ್ ರಾಜ್‍ಕುಮಾರ್ ಅಗಲಿಕೆ ವಿಚಾರ ತಿಳಿಸಿಲ್ಲ ಎನ್ನಲಾಗಿದೆ.
ಹೌದು, ಅಂದಾಜು 90 ವರ್ಷ ವಯಸ್ಸಿನ ನಾಗಮ್ಮ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಕೆಲ ತಿಂಗಳುಗಳಿಂದ ಹಾಸಿಗೆ ಹಿಡಿದಿದ್ದಾರೆ. ನಾಗಮ್ಮ ಅವರನ್ನು ಕಂಡರೆ ಸೋದರಳಿಯ ಅಪ್ಪುವಿಗೆ, ಅಪ್ಪುವನ್ನು ಕಂಡರೆ ಸೋದರತ್ತೆ ನಾಗಮ್ಮಗೆ ಎಲ್ಲಿಲ್ಲದ ಪ್ರೀತಿ. ಇಬ್ಬರಿಗೂ ಬಿಟ್ಟಿರಲಾರದ ನಂಟಿರುವ ಹಿನ್ನೆಲೆಯಲ್ಲಿ ಪುನೀತ್ ಅಗಲಿಕೆ ವಿಚಾರವನ್ನು ಅತ್ತೆಗೆ ತಿಳಿಸಿಲ್ಲ ಎಂದು ಕುಟುಂಬ ಮೂಲಗಳು ತಿಳಿಸಿವೆ.
![puneeth](https://etvbharatimages.akamaized.net/etvbharat/prod-images/kn-cnr-03-raj-tangi-av-ka10038_30102021095319_3010f_1635567799_482.jpg)
ಸದ್ಯಕ್ಕೆ ನಾಗಮ್ಮ ಅವರ ಮಗ ಗೋಪಾಲ್, ತಮ್ಮ ಪತ್ನಿ, ಮಗಳೊಂದಿಗೆ ನಿನ್ನೆಯೇ ಬೆಂಗಳೂರಿಗೆ ತೆರಳಿದ್ದಾರೆ. ದೊಡ್ಡಗಾಜನೂರಿನಲ್ಲಿ ನೀರವ ಮೌನ ಆವರಿಸಿದ್ದು, ನೂರಾರು ಮಂದಿ ಅಭಿಮಾನಿಗಳು ನಟನ ಅಂತಿಮ ದರ್ಶನ ಪಡೆಯಲು ತೆರಳಿದ್ದಾರೆ.