ಚಾಮರಾಜನಗರ: ಜಾತ್ರೆ ಮುಗಿದಿದ್ದರೂ ಪ್ರಸಿದ್ಧ ಯಾತ್ರಾಸ್ಥಳವಾದ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತ ಜನಸಾಗರವೇ ಹರಿದು ಬರುತ್ತಿದೆ. ಕೇವಲ ಎರಡು ದಿನಗಳಿಗೆ ಬರೀ ಸೇವೆಗಳಿಂದ 20 ಲಕ್ಷ ರೂ. ಆದಾಯ ಬಂದಿದೆ ಎಂದು ವರದಿಯಾಗಿದೆ.
ಕೊರೊನಾ ನಂತರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಬರುತ್ತಿದ್ದು, ಸೋಮವಾರ ಒಂದೇ ದಿನ 17,94,289 ರೂ. ಆದಾಯ ಬಂದಿದ್ದು, ಮಂಗಳವಾರ 2,26,536 ಲಕ್ಷ ರೂ ಆದಾಯ ಬಂದಿದೆ ಎಂದು ಹೇಳಲಾಗಿದೆ. ಎರಡು ದಿನಗಳಲ್ಲಿ ಹಲವು ಸೇವೆಗಳಾದ ಚಿನ್ನದ ರಥ, ಬಸವ ವಾಹನ, ಹುಲಿ ವಾಹನ, ರುದ್ರಾಕ್ಷಿ ವಾಹನ ಸೇವೆಗಳಿಂದ ಲಕ್ಷಾಂತರ ರೂ. ಆದಾಯ ಬಂದಿರುವುದಾಗಿ ಹೇಳಲಾಗಿದೆ. ಸೋಮವಾರದಂದು ಚಿನ್ನದ ರಥ ಸೇವೆ 13 ಲಕ್ಷ ಆದಾಯ ಬಂದಿದ್ದು, ಕಳೆದ ಎರಡು ದಿನಗಳಿಂದ 450 ಕ್ಕೂ ಹೆಚ್ಚು ಮಂದಿ ಚಿನ್ನದ ರಥ ಸೇವೆ ನೆರವೇರಿಸಿದ್ದಾರೆ. ಮತ್ತು ಒಂದೂವರೆ ಸಾವಿರ ಮಂದಿ ಹುಲಿವಾಹನ ಸೇವೆಯನ್ನು ನೆರವೇರಿಸಿದ್ದಾರೆ.
ಇನ್ನು, ಜಾತ್ರೆಗೆ ಕಾಲ್ನಡಿಗೆ ಮೂಲಕ ಬೆಟ್ಟಕ್ಕೆ ಬಂದಿದ್ದ ಪಾದಾಯಾತ್ರಿಗಳು ತಮ್ಮ - ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದಾರೆ. ಕೆಲ ಭಕ್ತಾದಿಗಳು ಅಗಲಿದ ನಟ ಪುನೀತ್ ರಾಜ್‍ಕುಮಾರ್ ಫೋಟೋ ಹಿಡಿದು ಪಾದಯಾತ್ರೆ ಮುಗಿಸಿ ಹಿಂತಿರುಗಿದ್ದಾರೆ.
ಓದಿ : ಉಕ್ರೇನ್ನಿಂದ ಪಾಕ್ ವಿದ್ಯಾರ್ಥಿನಿ ರಕ್ಷಣೆ.. ಮೋದಿ, ಭಾರತೀಯ ರಾಯಭಾರ ಕಚೇರಿಗೆ ಧನ್ಯವಾದ ಹೇಳಿದ ಅಸ್ಮಾ!