ETV Bharat / state

ಮಾದಪ್ಪನ ಶಿವರಾತ್ರಿ ಜಾತ್ರೆಗೆ ಆಗಮಿಸುತ್ತಿರುವ ಭಕ್ತರು: ಕಾವೇರಿ ನದಿ ದಾಟುತ್ತಿರುವ ಜನ ಸಾಗರ - Chamarajanagar Shivaratri fair

ನಾಳೆಯಿಂದ 21ರ ವರೆಗೆ ಮಾದಪ್ಪನ ಮಹಾಶಿವರಾತ್ರಿ ಜಾತ್ರೆ - ಮಲೆ ಮಹದೇಶ್ವರ ಬೆಟ್ಟಕ್ಕೆ ಹರಿದುಬರುತ್ತಿರುವ ಭಕ್ತಸಾಗರ - ಕಾವೇರಿ ನದಿ ದಾಟುತ್ತಿರುವ ಲಕ್ಷಾಂತರ ಮಂದಿ ಭಕ್ತರು - ಪಾದಯಾತ್ರಿಗಳ ಸುರಕ್ಷತೆಗೆ 20 ನುರಿತ ಈಜುಗಾರರ ನೇಮಕ

madappa shivaratri fair
ಕಾವೇರಿ ನದಿ ದಾಟುತ್ತಿರುವ ಜನ ಸಾಗರ
author img

By

Published : Feb 16, 2023, 12:39 PM IST

Updated : Feb 16, 2023, 1:28 PM IST

ಮಾದಪ್ಪನ ಶಿವರಾತ್ರಿ ಜಾತ್ರೆಗೆ ಆಗಮಿಸುತ್ತಿರುವ ಭಕ್ತ ಸಾಗರ

ಚಾಮರಾಜನಗರ: ದಕ್ಷಿಣ ಭಾರತದ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ‌ ಒಂದಾಗಿರುವ ಹನೂರು ತಾಲೂಕಿನ‌ ಮಲೆಮಹದೇಶ್ವರ ಬೆಟ್ಟದಲ್ಲಿ ಇದೇ 17 ರಿಂದ 21ರ ವರೆಗೆ ಮಹಾಶಿವರಾತ್ರಿ ಜಾತ್ರೆ ನಡೆಯಲಿದ್ದು ಭಕ್ತಸಾಗರವೇ ಹರಿದು ಬರುತ್ತಿದೆ. ಮಾದಪ್ಪನ ಬೆಟ್ಟಕ್ಕೆ ಬೆಂಗಳೂರು, ರಾಮನಗರ, ಮಂಡ್ಯ, ಕನಕಪುರ ಸೇರಿದಂತೆ ಅನೇಕ ಕಡೆಗಳಿಂದ ಆಗಮಿಸುತ್ತಿರುವ ಜನರು ಕಾವೇರಿ ಸಂಗಮದಲ್ಲಿ ನದಿ ದಾಟುತ್ತಿರುವುದು ಜನಪ್ರವಾಹದಂತೆ ಭಾಸವಾಗುತ್ತಿದೆ.

ಹೌದು, ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಶಿವರಾತ್ರಿ ಜಾತ್ರೆ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಭಕ್ತರು ನದಿ ದಾಟಿ ಬರುತ್ತಿದ್ದಾರೆ. ಇವರಿಗೆ ಸ್ಥಳೀಯರು ಮಜ್ಜಿಗೆ, ಪಾನಕ ವಿತರಿಸುತ್ತಿದ್ದಾರೆ. ಕಳೆದ ಬಾರಿ ಪಾದಯಾತ್ರೆ ಮೂಲಕ ತೆರಳುತ್ತಿದ್ದ ವೇಳೆ ಕಾವೇರಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಾಗಿ ಮೂವರು ಭಕ್ತರು ನಾಪತ್ತೆಯಾಗಿದ್ದ ಹಿನ್ನೆಲೆ ಈ ಬಾರಿ ರಾಮನಗರ ಜಿಲ್ಲಾಡಳಿತದ ವತಿಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ ಆರಂಭ: 2 ವರ್ಷಗಳ ಬಳಿಕ ಕಳೆಗಟ್ಟಿದ ಸಂಭ್ರಮ

ನುರಿತ ಈಜುಗಾರರ ನೇಮಕ: ಕಳೆದ ವರ್ಷ ನದಿ ನೀರು ಏಕಾಏಕಿ ಹೆಚ್ಚಾದ ಪರಿಣಾಮ ಕೆಲವು ಭಕ್ತರು ನೀರಿನಲ್ಲಿ ತೇಲಿ ಹೋಗಿದ್ದರೆ ಇನ್ನೂ ಕೆಲವರು ನಾಪತ್ತೆಯಾಗಿದ್ದರು. ಈ ಬಾರಿ ಇಂತಹ ಘಟನೆಗಳು ಮರುಕಳಿಸಿದಂತೆ ಹಾಗೂ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೀರಿನ ಹೊರಹರಿವನ್ನು ನಿಲ್ಲಿಸಲಾಗಿದ್ದು, ಪಾದಯಾತ್ರಿಗಳ ಸುರಕ್ಷತೆಗೆ 20 ನುರಿತ ಈಜುಗಾರರನ್ನು ನೇಮಿಸಲಾಗಿದೆ.

ಇದನ್ನೂ ಓದಿ: ಫಲಿಸಿದ ಹರಕೆ: ಕೆನಡಾದಿಂದ ಮಾದಪ್ಪನ ಬೆಟ್ಟಕ್ಕೆ ಬಂದು ಗೋವು ದಾನ ಕೊಟ್ಟ ಭಕ್ತ

500 ಬಸ್ ಸೌಕರ್ಯ, ಬೈಕ್​ಗಳಿಗೆ ನಿರ್ಬಂಧ: ಮಲೆಮಹದೇಶ್ವರ ಬೆಟ್ಟ ಜಾತ್ರೆಗಾಗಿ ಸಾರಿಗೆ ಸಂಸ್ಥೆಯು 5 ದಿನಗಳ ಕಾಲ ನಿರಂತರ 500 ಬಸ್ ಸೇವೆಯನ್ನು ನೀಡಲು ಮುಂದಾಗಿದೆ. ಜೊತೆಗೆ, ಸುರಕ್ಷಿತ ಕ್ರಮವಾಗಿ ದ್ವಿಚಕ್ರ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಎಸ್​ಪಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟಕ್ಕೆ 8 ಲಕ್ಷ ಭಕ್ತರು, 7 ಲಕ್ಷ ಲಾಡು ಬಿಕರಿ.. ಪ್ಲಾಸ್ಟಿಕ್​ ತೆರವಿಗೆ ಬೇಕು 15 ದಿನ!

ಬಿಗಿ ಪೊಲೀಸ್​ ಭದ್ರತೆ: 17 ರಿಂದ 21ರ ವರೆಗೆ ಬೈಕ್​ಗಳ ಸಂಚಾರಕ್ಕೆ ಬ್ರೇಕ್ ಬಿದ್ದಿದ್ದು, ಇಬ್ಬರು ಡಿವೈಎಸ್​ಪಿ, 11 ಮಂದಿ ಪಿಐ, 30 ಮಂದಿ ಪಿಎಸ್ಐ, 68 ಎಎಸ್ಐ, 375 ಪೊಲೀಸ್ ಕಾನ್ಸ್‌ಟೇಬಲ್, 32 ಮಂದಿ ಮಹಿಳಾ ಕಾನ್ಸ್‌ಟೇಬಲ್, 4 ಡಿಎಆರ್, 1 ಕೆಎಸ್ಆರ್​ಪಿ ತುಕಡಿ ಹಾಗೂ 230 ಹೋಮ್​ಗಾರ್ಡ್​ಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

Last Updated : Feb 16, 2023, 1:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.