ಚಾಮರಾಜನಗರ: ಸಾಮಾನ್ಯವಾಗಿ ಹಸುಗಳು ಒಂದು ಕರು ಅಥವಾ ಅಪರೂಪಕ್ಕೆ ಅವಳಿ ಕರುಗಳಿಗೆ ಜನ್ಮ ನೀಡಿರುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ರೈತನ ಮನೆಯಲ್ಲಿ ಹಸುವೊಂದು ತ್ರಿವಳಿ ಕರುಗಳಿಗೆ ಜನ್ಮ ನೀಡಿದೆ. ಗುಂಡ್ಲುಪೇಟೆ ತಾಲೂಕಿನ ಬೆಳವಾಡಿ ಗ್ರಾಮದ ಬಸವಣ್ಣ ಎಂಬುವರು ಸಾಕಿರುವ ಹೆಚ್‍ಎಫ್ ತಳಿಯ ಹಸು ಮೂರು ಗಂಡು ಕರುಗಳನ್ನು ಜನ್ಮ ಕೊಟ್ಟಿದೆ. ರೈತನ ಮನೆಗೆ ಸಾಕಷ್ಟು ಮಂದಿ ಆಗಮಿಸುತ್ತಿದ್ದು, ಹಸು ಹಾಗು ಕರುಗಳು ಆರೋಗ್ಯವಾಗಿವೆ.
ಇದನ್ನೂ ಓದಿ: ಸಾಂಸ್ಕೃತಿಕ ನಗರಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ.. ಮಹಾರಾಣಿ ಕಾಲೇಜಿನ ಕಟ್ಟಡ ಕುಸಿತ