ಚಾಮರಾಜನಗರ: ಸಾಮಾಜಿಕ ಅಂತರ ಇರಬೇಕು, ಮಾಸ್ಕ್ ಧರಿಸಿರಬೇಕು, ನಿಯಮ ಉಲ್ಲಂಘಿಸಿದರೆ ದಂಡ ಎಂದು ನಿತ್ಯ ಜಾಗೃತಿ ಮೂಡಿಸುತ್ತಿದ್ದ ನಗರಸಭೆ ಸಿಬ್ಬಂದಿಗಳೇ ಕೋವಿಡ್ ನಿಯಮ ಬ್ರೇಕ್ ಮಾಡಿದ್ದಾರೆ.
ಚಾಮರಾಜನಗರ ನಗರಸಭೆ ಆರೋಗ್ಯ ನಿರೀಕ್ಷಕ ಮಹಾದೇವಸ್ವಾಮಿ ನಿವೃತ್ತರಾದ ಹಿನ್ನೆಲೆಯಲ್ಲಿ ಇಂದು ಖಾಸಗಿ ಕಲ್ಯಾಣ ಮಂಟದಲ್ಲಿ ಬೀಳ್ಕೊಡುಗೆ ಸಮಾರಂಭ ಅದ್ಧೂರಿಯಾಗಿ ನೇರವೇರಿಸಲಾಯಿತು. ಇದರಲ್ಲಿ ನೂರಾರು ಸರ್ಕಾರಿ ನೌಕರರು, ನಗರಸಭೆ ಸದಸ್ಯರು ಭಾಗಿಯಾಗಿದ್ದರು. ಈ ವೇಳೆ, ಕೊರೊನಾ ವಾರಿಯರ್ಸ್‌ಗಳೇ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಅಂತರ ಪಾಲನೆ ಮಾಡದಿರುವ ಅಂಗಡಿಗಳ ಮೇಲೆ, ಮಾಸ್ಕ್ ಧರಿಸದ ಜನರಿಗೆ ದಂಡ ವಿಧಿಸುತ್ತಿದ್ದ ನಗರಸಭೆ ಸಿಬ್ಬಂದಿ, ಇದೀಗ ತಾವೇ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಬೀಳ್ಕೊಡುಗೆ ಸಮಾರಂಭ ನಡೆಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕೊರೊನಾ ಸಂದರ್ಭದಲ್ಲಿ ಕಲ್ಯಾಣ ಮಂಟಪದಲ್ಲಿ ಬೀಳ್ಕೊಡುಗೆ ನಡೆಸುವ ಅಗತ್ಯವೇನಿತ್ತು?, ಕನಿಷ್ಠ ಮಾಸ್ಕ್ ಕೂಡ ಹಾಕದೇ ಅಸಡ್ಡೆ ಪ್ರದರ್ಶನ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.