ETV Bharat / state

ಚಾಮರಾಜನಗರ ಗಡಿಯಲ್ಲಿ ಕೋವಿಡ್‌ ಹೈ ಅಲರ್ಟ್, ಮಾಸ್ಕ್ ಕಡ್ಡಾಯ

ದೇಶಾದ್ಯಂತ ಒಮಿಕ್ರೋನ್ ವೈರಸ್ ಆತಂಕ ಎದುರಾದ ಹಿನ್ನೆಲೆಯಲ್ಲಿ ಚಾಮರಾಜನಗರ-ಕೇರಳ ಗಡಿಯಾದ ಮೂಲೆಹೊಳೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

High Alert
ಚಾಮರಾಜನಗರ- ಕೇರಳ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ
author img

By

Published : Nov 28, 2021, 10:29 AM IST

ಚಾಮರಾಜನಗರ: ಕೇರಳದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಹಾಗೂ ಹೊಸ ರೂಪಾಂತರಿ ತಳಿಯ ಆತಂಕದ ಹಿನ್ನೆಲೆಯಲ್ಲಿ ಚಾಮರಾಜನಗರ- ಕೇರಳ ಗಡಿಯಾದ ಮೂಲೆಹೊಳೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ತೀವ್ರ ತಪಾಸಣೆ ನಡೆಸಲಾಗುತ್ತಿದೆ.

ಶನಿವಾರ ರಾತ್ರಿ ಡಿಸಿ ಚಾರುಲತಾ ಸೋಮಲ್ ಚೆಕ್‍ಪೋಸ್ಟ್​ಗೆ ಭೇಟಿ ನೀಡಿ, 70 ಗಂಟೆಯೊಳಗಿನ RT-PCR ನೆಗೆಟಿವ್ ರಿಪೋರ್ಟ್ ಇಲ್ಲದವರನ್ನು ಯಾವ ಕಾರಣಕ್ಕೂ ರಾಜ್ಯದ ಒಳಗೆ ಬಿಡಬಾರದು. ರೋಗದ ಲಕ್ಷಣ ಹೊಂದಿದ್ದವರ ಮೇಲೆ ನಿಗಾ ಇಡಬೇಕು. ಜೊತೆಗೆ, ರಾಜ್ಯಕ್ಕೆ ಪ್ರವೇಶಿಸುವವರ ಸಂಪೂರ್ಣ ಮಾಹಿತಿಯನ್ನು ರಿಜಿಸ್ಟರ್‌ನಲ್ಲಿ ಬರೆದಿಡಬೇಕೆಂದು ಸೂಚಿಸಿದ್ದಾರೆ.

ಡಿಸಿ ಸೂಚನೆ ಮೇರೆಗೆ, ಮಾಸ್ಕ್ ಧರಿಸುವುದನ್ನು ಮತ್ತೆ ಕಡ್ಡಾಯಗೊಳಿಸಿದ್ದು, ಸಾರ್ವಜನಿಕ ಪ್ರದೇಶ, ದೇವಸ್ಥಾನ, ಬಸ್​ಗಳಲ್ಲಿ ಮಾಸ್ಕ್ ಕಡ್ಡಾಯ ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಒಂದು ವೇಳೆ ಮಾಸ್ಕ್​ ಹಾಕದಿದ್ದವರಿಗೆ ದಂಡ ವಿಧಿಸುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.