ಚಾಮರಾಜನಗರ: ಒಂದಂಕಿಯಲ್ಲಿರುತ್ತಿದ್ದ ಕೊರೊನಾ ಪ್ರಕರಣಗಳು ನಿತ್ಯ ಎರಡಂಕಿಯಲ್ಲಿ ವರದಿಯಾಗುತ್ತಿದ್ದು, ಪ್ರತಿದಿನ ಸೋಂಕು ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ. 48 ಇದ್ದ ಸಕ್ರಿಯ ಪ್ರಕರಣಗಳು ದಿಢೀರನೆ ಇಂದು 88ಕ್ಕೆ ಏರಿಕೆಯಾಗಿದೆ.
ಇಂದು 40 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ಓಂಶಕ್ತಿಗೆ ತೆರಳಿ ಸೋಂಕು ಅಂಟಿಸಿಕೊಂಡು ಬಂದ ಐವರಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರನ್ನೂ ಕೋವಿಡ್ ಕೇರ್ ಸೆಂಟರ್ ಮತ್ತು ಆಸ್ಪತ್ರೆಯಲ್ಲೇ ಇರಿಸಿಕೊಳ್ಳಲಾಗಿದ್ದು, ಹೋಂ ಐಸೋಲೇಷನ್ ಗೆ ಯಾರನ್ನೂ ಕಳುಹಿಸಿಲ್ಲ.
ಇದನ್ನೂ ಓದಿ: ಚಿಕ್ಕೋಡಿ: ಪ್ರವಚನಕ್ಕೆ ಬಂದಿದ್ದ ವೇಳೆ ಆಯತಪ್ಪಿ ಬಿದ್ದ ಸಿದ್ದೇಶ್ವರ ಸ್ವಾಮೀಜಿಗೆ ಗಂಭೀರ ಗಾಯ
1240 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ಇರಿಸಲಾಗಿದ್ದು, ಇಂದು 1236 ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿಗೆ ಲಸಿಕೆ ಕೊಡಲಾಗಿದೆ.