ಚಾಮರಾಜನಗರ: ಹಲವು ಗೊಂದಲ, ಆತಂಕಕ್ಕೆ ಕಾರಣವಾಗಿದ್ದ ಪಿ-650 ಸೋಂಕಿತನ ವರದಿ ನೆಗೆಟಿವ್ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಹಸಿರು ವಲಯದ ಚಾಮರಾಜನಗರ ಸದ್ಯ ನಿರಾಳವಾಗಿದೆ.
ಕೊರೊನಾ ಸೋಂಕು ಚಾಮರಾಜನಗರಕ್ಕೆ ಬಂದಿದ್ದ ಪೊಲೀಸ್ ಪೇದೆಗೆ ವಕ್ಕರಿಸಿದ ವಿಚಾರ ತಿಳಿದು ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಈ ಸಂಬಂಧ ಚೆಕ್ಪೋಸ್ಟ್ ಸಿಬ್ಬಂದಿ, ಹನೂರು ತಾಲೂಕಿನ ಬೆಳ್ತೂರು ಗ್ರಾಮದ ಪೇದೆಯ ಸಂಬಂಧಿಕರು ಸೇರಿದಂತೆ ಒಟ್ಟು 38 ಜನರನ್ನು ಕ್ವಾರೆಂಟೈನ್ ಮಾಡಲಾಗಿತ್ತು.
ಪೇದೆಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿದ್ದ ಕೇಂದ್ರವು ಒಂದೇ ಹೆಸರಿನಲ್ಲಿದ್ದ ಮಾದರಿಗಳನ್ನು ಕಳುಹಿಸುವಾಗ ನಡೆದ ತಪ್ಪಿನಿಂದ ಈ ಎಡವಟ್ಟಾಗಿದೆ ಎಂದು ತಿಳಿದು ಬಂದಿದೆ. ವರದಿಯ ದಾಖಲೆಗಳು ಬದಲಾಗಿ ಈ ಲೋಪವಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಸದ್ಯ ಇಬ್ಬರನ್ನು ಐಸೊಲೇಷನ್ನಲ್ಲಿ ನಿಗಾ ಇರಿಸಲಾಗಿದ್ದು ಮತ್ತೊಮ್ಮೆ ಸ್ಯಾಂಪಲ್ ಟೆಸ್ಟ್ ನಡೆಯಲಿದೆ.