ಚಾಮರಾಜನಗರ: ವೈದ್ಯರು, ಪೊಲೀಸರ ಬಳಿಕ ಈಗ ಯಳಂದೂರು ನ್ಯಾಯಾಧೀಶರಿಗೆ ಕೊರೊನಾ ಸೋಂಕು ತಗುಲಿದೆ.
ಯಳಂದೂರು ತಾಲೂಕು ಜೆಎಂಎಫ್ಸಿ ಹಾಗೂ ಸಿವಿಲ್ ನ್ಯಾಯಾಧೀಶರಿಗೆ ಚಾಲಕನ ಮೂಲಕ ವೈರಸ್ ಬಂದಿದೆ ಎನ್ನಲಾಗಿದ್ದು, ಯಾವುದೇ ರೋಗಲಕ್ಷಣಗಳಿಲ್ಲ ಎಂದು ತಿಳಿದುಬಂದಿದೆ.
ಶ್ರೀಸಾಮಾನ್ಯರಂತೆ ಚಾಮರಾಜನಗರ ಜಿಲ್ಲಾ ಕೇಂದ್ರದ ಕೋವಿಡ್ ಆಸ್ಪತ್ರೆಗೆ ನ್ಯಾಯಾಧೀಶರು ದಾಖಲಾಗಿದ್ದು, ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಆರೋಗ್ಯ ಇಲಾಖೆ ಕಲೆಹಾಕುತ್ತಿದೆ. ಯಳಂದೂರು ತಾಲೂಕು ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಯಲ್ಲೀಗ ಆತಂಕ ಮನೆಮಾಡಿದೆ.