ಚಾಮರಾಜನಗರ : ಇಂದು ಕೋವಿಡ್ನಿಂದ ಇಬ್ಬರು ಮೃತಪಡುವ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಹೊಸದಾಗಿ ಜಿಲ್ಲೆಯಲ್ಲಿ 39 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 700ರ ಗಡಿ ದಾಟಿದೆ.
46 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 236 ಹಾಗೂ 609 ಮಂದಿಯ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದೆ. 5 ಸಾವಿರಕ್ಕೂ ಹೆಚ್ಚು ಜನರಿಗೆ ಇಂದು ಆ್ಯಂಟಿಜೆನ್ ಟೆಸ್ಟ್ ಮಾಡಲಾಗಿದೆ.
ಇಂದು ಚಾಮರಾಜನಗರದಲ್ಲಿ 8 ಕೇಸ್, ಕೊಳ್ಳೇಗಾಲದಲ್ಲಿ 13, ಹನೂರಿನಲ್ಲಿ 2, ಗುಂಡ್ಲುಪೇಟೆಯಲ್ಲಿ 9 ಹಾಗೂ ಯಳಂದೂರಿನಲ್ಲಿ 7 ಕೇಸ್ ಪತ್ತೆಯಾಗಿದ್ದು, ಗುಂಡ್ಲುಪೇಟೆ ಬಳಿಕ ಜಿಲ್ಲೆಯ ಕೊಳ್ಳೇಗಾಲ ಕೊರೊನಾ ಹಾಟ್ಸ್ಪಾಟ್ ಆಗುತ್ತಿದೆ.
ಜಿಲ್ಲಾಧಿಕಾರಿ ಇಂದು ಫೇಸ್ಬುಕ್ ಲೈವ್ನಲ್ಲಿ ಬಂದು ಮಾತನಾಡಿ, ಕೊರೊನಾ ಪರಿಸ್ಥಿತಿ ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.