ETV Bharat / state

ಕೊರೊನಾ ಪೀಡಿತ ಪೇದೆ ಸಂಪರ್ಕಿತರ ಸ್ಯಾಂಪಲ್ ಲ್ಯಾಬ್​​ಗೆ ರವಾನೆ: ಡಿಸಿ ಮಾಹಿತಿ - ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿಕೆ

ಕೊರೊನಾ ಸೋಂಕಿತ ಪೇದೆಯ ಪ್ರಾಥಮಿಕ ಸಂಪರ್ಕಿತರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷಾ ಕೇಂದ್ರಕ್ಕೆ ರವಾನಿಸಲಾದೆ. ಪೇದೆಯ ಪ್ರಾಥಮಿಕ ಸಂಪರ್ಕಕ್ಕೆ 9 ತಿಂಗಳ ಮಗುವು ಸೇರಿ ಒಟ್ಟು 18 ಮಂದಿ ಬಂದಿದ್ದು, ಇವರಲ್ಲಿ 60 ವರ್ಷ ಮೇಲ್ಪಟ್ಟ 3 ಜನ ಹಾಗೂ 10 ವರ್ಷ ಒಳಗಿನ 4 ಮಂದಿಯನ್ನು ಕೋವಿಡ್ ಆಸ್ಪತ್ರೆಯಲ್ಲಿ ನಿಗಾ ಇಡಲಾಗಿದೆ.

DC  Dr. M.R.Ravi
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ
author img

By

Published : May 5, 2020, 5:04 PM IST

ಚಾಮರಾಜನಗರ: ಕೊರೊನಾ ಸೋಂಕಿತ ಪೊಲೀಸ್ ಪೇದೆಯ ಪ್ರಾಥಮಿಕ ಸಂಪರ್ಕಿತರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷಾ ಕೇಂದ್ರಕ್ಕೆ ರವಾನಿಸಲಾಗಿದ್ದು, ಫಲಿತಾಂಶ ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

ಪೇದೆಯ ಪ್ರಾಥಮಿಕ ಸಂಪರ್ಕಕ್ಕೆ 9 ತಿಂಗಳ ಮಗುವು ಸೇರಿ ಒಟ್ಟು 18 ಮಂದಿ ಬಂದಿದ್ದು, ಇವರಲ್ಲಿ 60 ವರ್ಷ ಮೇಲ್ಪಟ್ಟ 3 ಜನ ಹಾಗೂ 10 ವರ್ಷ ಒಳಗಿನ 4 ಮಂದಿಯನ್ನು ಕೋವಿಡ್ ಆಸ್ಪತ್ರೆಯಲ್ಲಿರಿಸಿ ನಿಗಾ ಇಡಲಾಗಿದೆ. ಉಳಿದವರನ್ನು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕ್ವಾರಂಟೈನ್​ ಮಾಡಲಾಗುವುದು ಎಂದು ತಿಳಿಸಿದರು. ಪೊಲೀಸ್ ಇಲಾಖೆಯ ಯಾವುದೇ ಅನುಮತಿ ಪಡೆಯದೇ p-650(40) ಜಿಲ್ಲೆಗೆ ಬಂದಿದ್ದಾರೆ. ಪೊಲೀಸ್ ಹುದ್ದೆಯಲ್ಲಿದ್ದರಿಂದ ಮೆಡಿಕಲ್ ಪರ್ಪಸ್ ಎಂದು ಮನವಿ ಮಾಡಿಕೊಂಡು ಹನೂರು ತಾಲೂಕಿನ ಬೆಳತ್ತೂರು ಗ್ರಾಮದಲ್ಲಿನ ಹೆಂಡತಿ ತವರು ಮನೆಗೆ ಬಂದಿದ್ದಾರೆ ಎಂದು ತಿಳಿಸಿದರು.

ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ನೀಡಿದ ಬಳಿಕ ಅವರು ಈ ಸ್ಥಳಕ್ಕೆ ಬರಬಾರದಿತ್ತು. ಈ ಕುರಿತು ಸೂಕ್ತ ಕ್ರಮಕ್ಕಾಗಿ ಡಿಜಿ ಅವರಿಗೆ ಪತ್ರ ಬರೆದಿರುವುದಾಗಿ ಮಾಹಿತಿ ನೀಡಿದರು. ಇನ್ನು, ಚೆಕ್‍ಪೋಸ್ಟ್ ನಲ್ಲಿ ಹತ್ತಿರದಿಂದ ಸಂವಹನ ನಡೆಸಿದ್ದ 5 ಮಂದಿಯನ್ನು ಕೂಡ ಕ್ವಾರಂಟೈನ್​ ಮಾಡಲಾಗುವುದು. ಜೊತೆಗೆ, ಇನ್ನೂ ಯಾರ್ಯರು ಪ್ರಾಥಮಿಕ ಸಂಪರ್ಕ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಡಿಸಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.