ಚಾಮರಾಜನಗರ: ಕೊರೊನಾ ಕಟ್ಟೆಚ್ಚರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಇಂದು ಗುಂಡ್ಲುಪೇಟೆ ತಾಲೂಕಿನ ಕೇರಳ ಗಡಿ ಮೂಲೆಹೊಳೆ ಚೆಕ್‌ಪೋಸ್ಟ್‌ಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು.
ಕೇರಳ ರಾಜ್ಯದಿಂದ ಬರುತ್ತಿರುವ ಸರಕು ಸಾಗಾಣಿಕೆ, ಸಾರ್ವಜನಿಕರ ವಾಹನಗಳು ಸೇರಿದಂತೆ ಎಲ್ಲಾ ಬಗೆಯ ವಾಹನ ತಪಾಸಣೆಯನ್ನು ವೀಕ್ಷಿಸಿದ ಅವರು, ಕೇರಳದಿಂದ ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ RT-PCR ನೆಗೆಟಿವ್ ವರದಿ ತರಬೇಕು, ಎಲ್ಲಾ ವಾಹನಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದು ಚೆಕ್‌ಪೋಸ್ಟ್ ಸಿಬ್ಬಂದಿಗೆ ಸೂಚನೆ ನೀಡಿದರು.
ನೆಗೆಟಿವ್ ವರದಿ ಇರುವವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ಕೊಡಿ, ಯಾವುದೇ ಕಾರಣಕ್ಕೂ ವರದಿ ಇಲ್ಲದವರನ್ನು ಬಿಡಬೇಡಿ. RT-PCR ಪರೀಕ್ಷೆಯ ವರದಿಯನ್ನು ವಾಹನಗಳ ದಾಖಲಾತಿ ಪುಸ್ತಕದಲ್ಲಿ ನಮೂದಿಸಬೇಕು. ವರದಿ ಇಲ್ಲದೇ ಬಂದವರನ್ನು ವಾಪಸ್ ಕಳುಹಿಸಿದ ಮಾಹಿತಿಯನ್ನೂ ಬರೆಯಬೇಕು ಎಂದು ಚೆಕ್‌ಪೋಸ್ಟ್ ಸಿಬ್ಬಂದಿಗೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಇಳಿಯುತ್ತಿದ್ದು ಸಕ್ರೀಯ ಕೇಸ್ಗಳು 500 ರ ಆಸುಪಾಸಿನಲ್ಲಿದೆ.
ಇದನ್ನೂ ಓದಿ: ಮಾಧ್ಯಮ ಕ್ಷೇತ್ರ, ಪತ್ರಕರ್ತರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಬಿಎಸ್ವೈ