ಚಾಮರಾಜನಗರ: ಇಂದು 10 ಮಂದಿ ಪೊಲೀಸರು ಸೇರಿದಂತೆ ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 86 ಕೋವಿಡ್ ಕೇಸ್ ದೃಢಪಟ್ಟಿದೆ. ಈ ಮುಖೇನ ಸಕ್ರಿಯ ಪ್ರಕರಣಗಳ ಸಂಖ್ಯೆ 174ಕ್ಕೆ ಏರಿಕೆಯಾಗಿದ್ದು, ದಿನದಿಂದ ದಿನಕ್ಕೆ ಹೊಸ ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ.
ದಾಖಲಾದ 86 ಕೇಸುಗಳಲ್ಲಿ ಗುಂಡ್ಲುಪೇಟೆ ಪಿಐ ಸೇರಿದಂತೆ 8 ಮಂದಿ, ಚಾಮರಾಜನಗರ ಹಾಗೂ ಕೊಳ್ಳೇಗಾಲದಲ್ಲಿ ತಲಾ ಓರ್ವ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಎಲ್ಲರೂ ಸೌಮ್ಯ ರೋಗ ಲಕ್ಷಣ ಹೊಂದಿದ್ದಾರೆ. ಇಂದು 6 ಮಂದಿ ಮಕ್ಕಳಲ್ಲೂ ಸೋಂಕು ಕಾಣಿಸಿದೆ. 174 ಮಂದಿಯಲ್ಲಿ ಐವರನ್ನು ಮಾತ್ರ ಹೋಂ ಐಸೋಲೇಷನ್ನಲ್ಲಿಟ್ಟಿದ್ದು ಉಳಿದವರು ಕೋವಿಡ್ ಆರೈಕೆ ಕೇಂದ್ರಗಳಲ್ಲಿದ್ದಾರೆ.
1,118 ಮಂದಿ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ಇಡಲಾಗಿದೆ. 4,924 ಮಂದಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ 439 ಮಂದಿ ಕಿರಿಯರು ವ್ಯಾಕ್ಸಿನ್ ಪಡೆದಿದ್ದಾರೆ.
ದಿನದಿಂದ ದಿನಕ್ಕೆ ಕೊರೊನಾ ಏರಿಕೆ ಕಂಡಿದ್ದರೂ ಜನರು ಮಾಸ್ಕ್ ಧರಿಸದೇ ಅಡ್ಡಾಡುವುದು ಸಾಮಾನ್ಯವಾಗಿದೆ. ನಗರಸಭೆ, ಜಿಲ್ಲಾಡಳಿತವೇ ಆಗಲಿ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುವುದನ್ನೇ ಮರೆತಂತಿದೆ.
ಇದನ್ನೂ ಓದಿ: 'ಕೊರಗಜ್ಜನಿಗೆ ಅವಮಾನ ಮಾಡಿದವನನ್ನು ಜಮಾಅತ್ನಿಂದ ಹೊರಹಾಕಿ ಫತ್ವಾ ಹೊರಡಿಸಲಿ'