ETV Bharat / state

ಪತ್ರಕರ್ತನ ಮೇಲೆ ಪೊಲೀಸ್​ ಹಲ್ಲೆ ಖಂಡಿಸಿ ಸಚಿವ ಸುರೇಶ್ ಕುಮಾರ್​ಗೆ ದೂರು

ಮೈಸೂರಿನಲ್ಲಿ ಪೊಲೀಸರಿಂದ ಮಾಧ್ಯಮ ವರದಿಗಾರನ ಮೇಲೆ ಹಲ್ಲೆ ನಡೆದಿರುವದನ್ನು ಖಂಡಿಸಿ ಕೊಳ್ಳೇಗಾಲ ಪತ್ರಕರ್ತರ ಸಂಘ ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದೆ.

Attack on private Kannada channel reporter in Mysore
ಪತ್ರಕರ್ತನ ಮೇಲೆ ಪೊಲೀಸ್ ಹಲ್ಲೆ ಖಂಡಿಸಿ ಸಚಿವ ಸುರೇಶ್ ಕುಮಾರ್​ಗೆ ದೂರು
author img

By

Published : Apr 19, 2020, 9:05 PM IST

ಕೊಳ್ಳೇಗಾಲ: ದೇಶಾದ್ಯಂತ ಕೋವಿಡ್-19 ಅಟ್ಟಹಾಸ ಮುಂದುವರೆದಿದ್ದು, ಈ ಸಮಯದಲ್ಲಿ ಜೀವದ ಭಯವಿಲ್ಲದೆ ಹಗಲಿರುಳು ಮಾಧ್ಯಮ ವರದಿಗಾರರು ರಸ್ತೆಗಳಿದು ಜನರ ಜಾಗೃತಿಗೆ ಮುಂದಾಗಿದ್ದಾರೆ. ಹೀಗಿರುವಾಗ ಮೈಸೂರಿನಲ್ಲಿ ಪೊಲೀಸರಿಂದ ಮಾಧ್ಯಮ ವರದಿಗಾರನ ಮೇಲೆ ಹಲ್ಲೆ ನಡೆದಿರುವದನ್ನು ಖಂಡಿಸಿ ಕೊಳ್ಳೇಗಾಲ ಪತ್ರಕರ್ತರ ಸಂಘ ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದೆ.

ಈ ಪರಿಸ್ಥಿತಿಯಲ್ಲಿ ಮಾಧ್ಯಮದ ಕಾರ್ಯ ಅಗತ್ಯ ಸೇವೆ ಎಂದು ಪರಿಗಣಿಸಿದ್ದರೂ ಪೊಲೀಸರಿಂದ ಹಲ್ಲೆ ನಡೆದಿರುವುದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತನ ಮೇಲೆ ಪೊಲೀಸ್ ಹಲ್ಲೆ ಖಂಡಿಸಿ ಸಚಿವ ಸುರೇಶ್ ಕುಮಾರ್​ಗೆ ದೂರು

ನಿನ್ನೆ ಮೈಸೂರಿನಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದರ ವರದಿಗಾರ ಯಶಸ್ ಎಂಬುವರು ವರದಿಗಾರಿಕೆಗೆ ತೆರಳುತ್ತಿದ್ದ ವೇಳೆ ಮೈಸೂರಿನ ಕುವೆಂಪು ನಗರದಲ್ಲಿ ಕರ್ತವ್ಯನಿರತ ಪೊಲೀಸರು ತಡೆದು ಪ್ರಶ್ನೆ ಮಾಡಿದ್ರು. ಈ ವೇಳೆ ಯಶಸ್ ತಾವು ಪತ್ರಕರ್ತರೆಂದು ಹೇಳಿ ಗುರುತಿನ ಚೀಟಿ ತೋರಿಸಿದರೂ ತಡೆದು ಹಲ್ಲೆ ನಡೆಸಿ ಠಾಣೆಗೆ ಕರೆದೊಯ್ದಿದ್ದರು. ಆದ್ದರಿಂದ ತಪ್ಪಿತಸ್ಥ ಪೊಲೀಸರ ಮೇಲೆ ಕಾನೂನು ಕ್ರಮ ಜರುಗಿಸಿ ಹಲ್ಲೆಗೊಳ್ಳಗಾದ ಯಶಸ್ ಅವರಿಗೆ ನ್ಯಾಯ ದೊರಕಿಸಬೇಕು. ಈ ರೀತಿ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಸಲ್ಲಿಸಿದ್ದಾರೆ.

Attack on private Kannada channel reporter in Mysore
ಸುರೇಶ್ ಕುಮಾರ್ ಅವರಿಗೆ ಮನವಿ ಪತ್ರ

ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ಘಟನೆಯ ಬಗ್ಗೆ ಡಿಜಿ ಜೊತೆ ಚರ್ಚಿಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ವಹಿಸುವಂತೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.