ETV Bharat / state

ಬಂಡಿಪುರ ಅರಣ್ಯ ಪ್ರದೇಶದಲ್ಲಿ ಪೋರ್ಚುಗಲ್ ಪ್ರಜೆಗಳ ದಾಂಧಲೆ...ದೂರು

author img

By

Published : Jun 8, 2020, 4:30 PM IST

ಚಾಮರಾಜನಗರದ ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಮೂವರು ಪೋರ್ಚುಗಲ್ ಪ್ರಜೆಗಳು ಅಕ್ರಮವಾಗಿ ಪ್ರವೇಶಿಸಿರುವುದಲ್ಲದೆ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಅನುಚಿತ ವರ್ತನೆ ತೋರಿಸಿದ್ದಾರೆ. ಈ ಬಗ್ಗೆ ಮೊಕದ್ದಮೆ ದಾಖಲಾಗಿದೆ.

Portuguese citizens
ಪೋರ್ಚುಗಲ್ ಪ್ರಜೆಗಳ ದಾಂಧಲೆ

ಚಾಮರಾಜನಗರ: ನಿರ್ಬಂಧಿತ ಪ್ರದೇಶಕ್ಕೆ ಬೈಕ್ ಮೂಲಕ ಮೂವರು ಪೋರ್ಚುಗಲ್ ದೇಶದ ಪ್ರಜೆಗಳು ಪ್ರವೇಶಿಸಿ ಗಲಭೆ ಮಾಡಿರುವ ಘಟನೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ವಲಯದಲ್ಲಿ ನಡೆದಿದೆ.

Portuguese citizens
ಪೋರ್ಚುಗಲ್ ಪ್ರಜೆಗಳ ದಾಂಧಲೆ

ನುನೋ ರಿಕಾರ್ಡೊ, ಮಿಗ್ವೆಲ್ ಗ್ಯಾರಿಡೋ, ಥಾಮಸ್ ಪಿನ್ಹೋ ಎಂಬ ಪೋರ್ಚುಗೀಸರು ಸಫಾರಿ ವಲಯಕ್ಕೆ ಬೈಕ್ ಮೂಲಕ ಅಕ್ರಮವಾಗಿ ಪ್ರವೇಶಿಸಿದಲ್ಲದೆ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ತೋರಿದ್ದಾರೆ ಎನ್ನಲಾಗುತ್ತಿದೆ. ಈ ಮೂವರೂ ಕೂಡಾ ಡಿಆರ್​ಡಿಒಗೆ ಬಂದಿರುವ ವಿಶೇಷ ಎಂಜಿನಿಯರ್​​​ಗಳು ಎಂದು ತಿಳಿದುಬಂದಿದೆ. ಈ ಮೂವರ ಮೇಲೆ ವಿದೇಶಿ ಪ್ರಜೆಗಳ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಿ ಗುಂಡ್ಲುಪೇಟೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಇದರಿಂದ ಅರಣ್ಯ ಇಲಾಖೆ ವಿರುದ್ಧ ಈ ಮೂವರೂ ಕೂಡಾ ರಾಯಭಾರ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ, ಮೂವರನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದ್ದು ಅವರ ಬೈಕ್​​​​​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.