ETV Bharat / state

ಆನೆ ಶಿಬಿರ, ವನ್ಯಜೀವಿ ಸಫಾರಿ: ಕಾಡಂಚಿನ ಗ್ರಾಮಗಳಲ್ಲಿ ಚಿಗುರಿತು ಹೊಸ ಕನಸು

ಹನೂರು ತಾಲೂಕಿನ ಗೋಪಿನಾಥಂ‌ ಗ್ರಾಮದಲ್ಲಿ 5 ಕೋಟಿ ರೂ.‌ವೆಚ್ಚದಲ್ಲಿ ವನ್ಯಜೀವಿ ಸಫಾರಿ ಆರಂಭ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಿರುವುದರಿಂದ ಮೂಲ ಸೌಕರ್ಯದ ಕೊರತೆ ಅನುಭವಿಸುತ್ತಿರುವ ಗ್ರಾಮಸ್ಥರಿಗೆ ಈ ಮೂಲಕವಾದರೂ ನೆಮ್ಮದಿ ಬದುಕು ಸಿಗುವ ನಿರೀಕ್ಷೆ ಚಿಗುರೊಡೆದಿದೆ.

Wildlife Safari
ಆನೆ ಶಿಬಿರ
author img

By

Published : Mar 9, 2021, 4:59 PM IST

Updated : Mar 9, 2021, 6:10 PM IST

ಚಾಮರಾಜನಗರ: ನಿನ್ನೆ ಮುಖ್ಯಮಂತ್ರಿ ಬಿ‌‌‌.ಎಸ್‌. ಯಡಿಯೂರಪ್ಪ ಮಂಡಿಸಿದ ಬಜೆಟ್​ನಲ್ಲಿ ಘೋಷಿಸಿದ ಚಾಮರಾಜನಗರ ಬೂದಿಪಡಗದಲ್ಲಿ ಆನೆ ಶಿಬಿರ ಹಾಗೂ ಹನೂರು ತಾಲೂಕಿನ ಗೋಪಿನಾಥಂನಲ್ಲಿ ವನ್ಯಜೀವಿ ಸಫಾರಿ ಯೋಜನೆಗಳು ಕಾಡಂಚಿನ ಗ್ರಾಮಸ್ಥರಲ್ಲಿ ಹೊಸ ಕನಸೊಂದನ್ನು ಚಿಗುರುವಂತೆ ಮಾಡಿದೆ.

ಜಿಲ್ಲೆಯ ಭೂಭಾಗದಲ್ಲಿ ಅರ್ಧದಷ್ಟು ಅರಣ್ಯವೇ ಇದ್ದು, ಪರಿಸರ ಪ್ರವಾಸೋದ್ಯಮಕ್ಕೆ ಸಿಎಂ ಆಸಕ್ತಿ ತೋರಿರುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ, ಮೂಲ ಸೌಕರ್ಯಗಳ ಅಭಿವೃದ್ಧಿ ಆಗುವ ನಿರೀಕ್ಷೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಬಜೆಟ್​ನಿಂದ ಕಾಡಂಚಿನ ಗ್ರಾಮಗಳಲ್ಲಿ ಚಿಗುರಿತು ಹೊಸ ಕನಸು

ಈ‌‌ ಹಿಂದೆ ಹಳೇ ಮೈಸೂರು ಪ್ರಾಂತ್ಯದಲ್ಲಿದ್ದ ಎರಡೇ ಎರಡು ಆನೆ ಖೆಡ್ಡಾಗಳಲ್ಲಿ ಬೂದಿಪಡಗವು‌ ಒಂದಾಗಿತ್ತು. ‌ಈಗ, ಬೂದಿಪಡಗದಲ್ಲಿ 1 ಕೋಟಿ ರೂ.‌ ವೆಚ್ಚದಲ್ಲಿ ಆನೆ ಶಿಬಿರ ಮಾಡಲು‌ ಉದ್ದೇಶಿಸಿರುವುದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ.‌ ಮಾನವನಂತೆ ಆನೆಯೂ ಸಂಘಜೀವಿಯಾಗಿದ್ದು‌ ಈಗ ಕೆ.ಗುಡಿ ಆನೆ ಶಿಬಿರದಲ್ಲಿ ಒಂದೇ ಒಂದು ಆನೆ ಇದೆ. ಬೂದಿಪಡಗದಲ್ಲಿ ಆನೆ ಶಿಬಿರ ಮಾಡುವ ಮೂಲಕ ಬಂಡೀಪುರ, ನಾಗರಹೊಳೆಯಿಂದ ಮತ್ತಷ್ಟು ಆನೆಗಳನ್ನು ತರಿಸಿ ಬೂದಿಪಡಗ ಆನೆ ಶಿಬಿರ ಆರಂಭಿಸಲಾಗುತ್ತದೆ.

ಬೂದಿ ಪಡಗ ಸುವರ್ಣಾವತಿ ಹಿನ್ನೀರಿನಲ್ಲಿ ಬರುವುದರಿಂದ ಆನೆಗಳಿಗೂ ಅನುಕೂಲವಾಗುತ್ತದೆ. ಆನೆಗಳ ಮಾವುತರು ಮತ್ತು ಕಾವಾಡಿಗಳಿಗೂ ಶಿಬಿರದಲ್ಲಿ ಬೇಕಾದ ವ್ಯವಸ್ಧೆ ಕಲ್ಪಿಸುವ ಉದ್ದೇಶ ಹೊಂದಲಾಗಿದ್ದು, ಪ್ರವಾಸಿಗರ ಆಕರ್ಷಣೆಯ ಸ್ಥಳವಾಗಿಯೂ ಮಾರ್ಪಡಾಗುವ ಸಾಧ್ಯತೆ ಇದೆ.

ಕಾಡುಗಳ್ಳನ ಊರಿಗೆ ಕಾಯಕಲ್ಪ: ಹನೂರು ತಾಲೂಕಿನ ಗೋಪಿನಾಥಂ‌ ಗ್ರಾಮದಲ್ಲಿ 5 ಕೋಟಿ ರೂ.‌ವೆಚ್ಚದಲ್ಲಿ ವನ್ಯಜೀವಿ ಸಫಾರಿ ಆರಂಭ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಿರುವುದರಿಂದ ಮೂಲ ಸೌಕರ್ಯದ ಕೊರತೆ ಅನುಭವಿಸುತ್ತಿರುವ ಗ್ರಾಮಸ್ಥರಿಗೆ ಈ ಮೂಲಕವಾದರೂ ನೆಮ್ಮದಿಯ ಬದುಕು ಸಿಗುವ ನಿರೀಕ್ಷೆ ಮೂಡಿದೆ.

ಮಲೆ ಮಹದೇಶ್ವರ ಬೆಟ್ಟ, ಸಫಾರಿ: ಹೊಗೇನಕಲ್ ಜಲಪಾತ ವೀಕ್ಷಣೆಯ ಪ್ಯಾಕೇಜ್ ರೀತಿ ಮಾಡಿದರೇ ಪ್ರವಾಸಿಗರನ್ನು ಸೆಳೆಯಬಹುದಾಗಿದೆ. ಜೊತೆಗೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್, ಮೊಬೈಲ್ ನೆಟ್ವರ್ಕ್ ಸಮಸ್ಯೆ ನೀಗುವ ಆಶಾಭಾವನೆ ಜನರದ್ದಾಗಿದೆ.

ವನ್ಯಜೀವಿ ಸಫಾರಿ ಆರಂಭಿಸಿದ ವೇಳೆ ಸ್ಥಳೀಯರಿಗೆ ಉದ್ಯೋಗವಕಾಶ, ಹೋಟೆಲ್ ಉದ್ಯಮವೂ ಕೂಡ ಆ ಭಾಗದಲ್ಲಿ ಬೆಳೆಯುವ ಸಾಧ್ಯತೆಯಿದೆ‌

Last Updated : Mar 9, 2021, 6:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.