ಚಾಮರಾಜನಗರ: ದಾರಿ ಮಧ್ಯೆ ಆಟೋ ನಿಲ್ಲಿಸಿದ್ದ ವಿಚಾರಕ್ಕೆ ಎರಡು ಗ್ರಾಮಗಳ ಗುಂಪುಗಳ ನಡುವೆ ಮಾರಾಮಾರಿ ಆಗಿದೆ. ಈ ಘಟನೆ ಚಾಮರಾಜನಗರ ತಾಲೂಕಿನ ವೀರಯ್ಯನಪುರ ಗ್ರಾಮದಲ್ಲಿ ನಡೆದಿದೆ.
ಈ ಸಂಬಂಧ ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಗ್ರಾಮದ ಮಹೇಶ್, ಲೋಕೇಶ್, ದೇವರಾಜು ಸೇರಿದಂತೆ ನಾಲ್ವರನ್ನು ಚಾಮರಾಜನಗರ ಪೂರ್ವ ಠಾಣೆ ಬಂಧಿಸಿದ್ದಾರೆ. ಕೋಳಿಪಾಳ್ಯ ಹಾಗೂ ವೀರಯ್ಯನಪುರ 600 ಮೀ ದೂರದಲ್ಲಿನ ಎರಡು ಗ್ರಾಮಗಳಾಗಿದ್ದು ಆಟೋ ನಿಲ್ಲಿಸಿದ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಕೊನೆಗೆ ಎರಡು ಗ್ರಾಮಗಳ ಯುವಕರ ಗುಂಪಿನ ನಡುವೆ ಘರ್ಷಣೆಯಾಗಿ ನಾಲ್ಕೈದು ಮಂದಿಗೆ ಸಣ್ಣಪುಟ್ಟ ಗಾಯಗಳೂ ಆಗಿತ್ತು.
![chamarajnagar](https://etvbharatimages.akamaized.net/etvbharat/prod-images/12218468_bng.jpg)
ಗಲಾಟೆ ಅತಿರೇಕಕ್ಕೆ ಹೋಗುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ವೀರಯ್ಯನಪುರ ಗ್ರಾಮದ ಮಹಾದೇವನಾಯಕ ಎಂಬವರು ಕೊಲೆ ಪ್ರಯತ್ನದ ದೂರು ನೀಡಿದ್ದರಿಂದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಇದು ನನ್ನ ಕೊನೆ ಫೇಸ್ಬುಕ್ ಪೋಸ್ಟ್... ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ 24ರ ಯುವತಿ