ETV Bharat / state

ಕೊಳ್ಳೇಗಾಲ ಆದರ್ಶ ಶಾಲೆಯ 14 ಮಕ್ಕಳಿಗೆ ಕೊರೊನಾ: 3 ದಿನ ರಜೆ ಘೋಷಣೆ - ಕೊಳ್ಳೇಗಾಲ ಆದರ್ಶ ಶಾಲೆಯ ಮಕ್ಕಳಿಗೆ ಕೊರೊನಾ ದೃಢ

ಮುಡಿಗುಂಡ ಗ್ರಾಮದ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗೆ ಸೋಮವಾರ ವೈರಸ್​ ದೃಢಪಟ್ಟಿತ್ತು. ಈ ಹಿನ್ನೆಲೆ ಎಲ್ಲಾ ಮಕ್ಕಳಿಗೂ ಕೋವಿಡ್ ತಪಾಸಣೆ ಮಾಡಿಸಿದಾಗ ಫಲಿತಾಂಶದ ಬಳಿಕ 13 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ.

children-tested-corona-in-aadarsha-school-at-kollegala
ಕೊಳ್ಳೇಗಾಲ ಆದರ್ಶ ಶಾಲೆ ಮಕ್ಕಳಿಗೆ ಕೊರೊನಾ ದೃಢ
author img

By

Published : Jan 18, 2022, 8:44 PM IST

ಕೊಳ್ಳೇಗಾಲ(ಚಾಮರಾಜನಗರ): ಪಟ್ಟಣದ ಮುಡಿಗುಂಡ ಗ್ರಾಮದ ಆದರ್ಶ ವಿದ್ಯಾಲಯದ 13 ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದ್ದು, ಮೂರು ದಿನಗಳ ಕಾಲ ಶಾಲೆಗೆ ರಜೆ ನೀಡುವಂತೆ ಬಿಇಒ ಚಂದ್ರ ಪಾಟೀಲ್ ಸೂಚನೆ ನೀಡಿದ್ದಾರೆ.

ಮುಡಿಗುಂಡ ಗ್ರಾಮದ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಒಬ್ಬರಿಗೆ ಸೋಮವಾರ ವೈರಸ್​ ದೃಢಪಟ್ಟಿದೆ. ಈ ಹಿನ್ನೆಲೆ ಎಲ್ಲಾ ಮಕ್ಕಳಿಗೂ ಕೋವಿಡ್ ತಪಾಸಣೆ ಮಾಡಿಸಲಾಗಿದ್ದು, ಫಲಿತಾಂಶದ ಬಳಿಕ 13 ಮಕ್ಕಳಿಗೆ ಸೋಂಕು ತಗುಲಿರುವುದು ದೃಢವಾಗಿದೆ.

ಈ ಹಿನ್ನೆಲೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಬಿಇಒ ಚಂದ್ರ ಪಾಟೀಲ್, ಆದರ್ಶ ಶಾಲೆಯ 14 ಮಕ್ಕಳಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಪ್ರಾಂಶುಪಾಲರಿಗೆ ಮೂರು ದಿನಗಳ ಕಾಲ ರಜೆ ಘೋಷಿಸಿ ಶಾಲೆಯನ್ನು ಸಂಪೂರ್ಣ ಸಾನಿಟೈಸ್​ಗೆ ಒಳಪಡಿಸಬೇಕೆಂದು ಸೂಚಿಸಿದ್ದೇನೆ ಎಂದರು.

ಓದಿ: ಕೊರಗರ ಮೇಲಿನ ಎಫ್ಐಆರ್‌ನ ರಾಜ್ಯ ಸರ್ಕಾರ ತಕ್ಷಣ ಹಿಂಪಡೆಯಲಿ : ಡಾ. ಜಿ. ಪರಮೇಶ್ವರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.