ಚಾಮರಾಜನಗರ: ಕೊರೊನಾ ಮಹಾಮಾರಿಗೆ ಹನೂರು ಪಟ್ಟಣ ಪಂಚಾಯತಿ ಸದಸ್ಯರೊಬ್ಬರು ಮೃತಪಟ್ಟಿದ್ದಾರೆ.
ಹನೂರಿನ ಬನ್ನಿಮಂಟಪ ನಿವಾಸಿ ಪ.ಪಂನ 2ನೇ ವಾರ್ಡಿನ ಸದಸ್ಯ ನಾಗರಾಜು (54) ಮೃತ ಪಟ್ಟಿದ್ದಾರೆ. ಕಳೆದ ವಾರ ಜ್ವರ ಕಾಣಿಸಿಕೊಂಡ ಹಿನ್ನೆಲೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೊರೊನಾ ದೃಢಪಟ್ಟಿತ್ತು.
ಕೊರೊನಾ ಜೊತೆಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ನಾಗರಾಜು ಚಿಕಿತ್ಸೆ ಫಲಕಾರಿಯಗದೆ ಇಂದು ಮೃತಪಟ್ಟಿದ್ದಾರೆ. ಮೃತರ ಅಂತ್ಯಸಂಸ್ಕಾರ ಕೋವಿಡ್-19 ನಿಯಮದಂತೆ ಪಟ್ಟಣದ ಹೊರವಲಯದ ಅವರ ಜಮೀನಿನಲ್ಲಿ ನೆರವೇರಿದೆ ಎಂದು ತಿಳಿದುಬಂದಿದೆ.