ಚಾಮರಾಜನಗರ: ಹಾಸ್ಯದಿಂದ ಕೂಡಿರುವ ರಜೆ ಅರ್ಜಿಗಳು ವೈರಲ್ ಆಗುವಂತೆ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರ ರಜಾ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಹೌದು, ಆರೋಗ್ಯ ಸಮಸ್ಯೆ, ಪ್ರವಾಸ, ವೈಯಕ್ತಿಕ ಕಾರಣಗಳಿಗೆ ರಜೆ ಕೇಳುವುದು ಸಾಮಾನ್ಯ. ಆದರೆ, ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರು "ತಾನು ಅವಿವಾಹಿತನಾಗಿದ್ದು, ವಧುವಿನ ಹುಡುಕಾಟದಲ್ಲಿರುವುದರಿಂದ ದಿನಾಂಕ್ 11-13 ಎರಡು ದಿನ ಆಕಸ್ಮಿಕ ರಜೆ, 14 ರಂದು ವಾರದ ರಜೆ ಕೊಡಬೇಕೆಂದು ರಜಾ ಅರ್ಜಿ ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇಂದಿನ ದಿನಾಂಕ ಅರ್ಜಿಯಲ್ಲಿ ನಮೂದಾಗಿದ್ದು ಪೊಲೀಸ್ ಇನ್ಸ್ಪೆಕ್ಟರ್ ಅವರ ಸಹಿಯಾಗಲಿ, ಮೊಹರಾಗಲಿ ಇಲ್ಲ. ಆದರೆ, ಕಾನ್ಸ್‌ಟೇಬಲ್ ಸಹಿ ಇದೆ.
ತಮಾಷೆಗೆ ಬರೆದ ಅರ್ಜಿ: ವೈರಲ್ ಪತ್ರದ ಕುರಿತು ಕಾನ್ಸ್‌ಟೇಬಲ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ರಜೆ ಅರ್ಜಿ ತಮಾಷೆಗೆಂದು ಬರೆದಿದ್ದು, ಮೇಲಧಿಕಾರಿಗಳಿಗೆ ನೀಡಬೇಕೆಂದು ಅದನ್ನು ಬರೆದುದ್ದಲ್ಲ. ಸ್ನೇಹಿತರ್ಯಾರೋ ಆ ಫೋಟೋ ತೆಗೆದು ಸ್ನೇಹಿತರಿಗೆ ವಾಟ್ಸ್ಆ್ಯಪ್ ಮಾಡಿದ್ದಾರೆ. ಅದು ಹಾಗೇ ವೈರಲ್ಲಾಗಿದೆ ಅಷ್ಟೇ ಎಂದು ಹೇಳಿದರು.
ಇದನ್ನೂ ಓದಿ: ಆಗಿರುವ ನಿಶ್ಚಿತಾರ್ಥ ಮುರಿದು ಬೀಳಲಿ.. ದೇವರಿಗೆ ಪತ್ರ ಬರೆದ ಅನಾಮಿಕ..
ಒಟ್ಟಿನಲ್ಲಿ ಕೊರೊನಾ ಲಾಕ್ಡೌನ್ ವೇಳೆ ನಾನ್ ವೆಜ್ ಊಟ ಮಾಡಬೇಕೆಂದು, ಬೀಗರ ಊಟಕ್ಕೆ ಹೋಗಬೇಕೆಂಬ ರಜೆ ಅರ್ಜಿ ವೈರಲ್ಲಾಗಿರುವಂತೆ ಈಗ ಈ ಅರ್ಜಿಯೂ ವೈರಲ್ಲಾಗಿದೆ.