ಚಾಮರಾಜನಗರ : ಮದುವೆ ಎಂದರೆ ಸಂಭ್ರಮ, ಸಡಗರ. ನೀವು ಬನ್ನಿ- ಮನೆಯವರನ್ನೂ ಕರೆತನ್ನಿ ಎಂದು ಕರೆಯುವುದು ಸಾಮಾನ್ಯ. ಆದರೆ, ಇಲ್ಲೊಂದು ಜೋಡಿ ಕೊರೊನಾದಿಂದಾಗಿ ಮದುವೆಗೆ ಬರಬೇಡಿ ಎಂಬ ಕರೆಯೋಲೆ ಹಂಚಿದ್ದಾರೆ.
ತಾಲೂಕಿನ ಚೆನ್ನಪ್ಪನಪುರ ಗ್ರಾಮದ ಶ್ರೇಯಸ್ ಹಾಗೂ ವಿ.ಸಿ.ಹೊಸೂರಿನ ಸುಷ್ಮಾ ಅವರ ವಿವಾಹವು ಬಹಳ ಹಿಂದೆಯೇ ನಿಗದಿಯಾಗಿತ್ತು. ಆಮಂತ್ರಣ ಪತ್ರಿಕೆಗಳನ್ನು ಹಂಚಲಾಗಿತ್ತು.
ಆದರೆ, ಕೊರೊನಾ ಕೇಸ್ ಹೆಚ್ಚಾಗುತ್ತಿರುವ ಹಿನ್ನೆಲೆ ಮತ್ತೊಂದು ಕರೆಯೋಲೆಯನ್ನು ವಧು-ವರರ ಕುಟುಂಬ ಹೊರಡಿಸಿದೆ. ಮನೆಯಲ್ಲೇ ಇದ್ದು ತಮಗೆ ಆಶೀರ್ವಾದ ಮಾಡಬೇಕೆಂಬ ಪತ್ರಿಕೆಗಳನ್ನು ಹಂಚುತ್ತಿದ್ದಾರೆ.
ಜನವರಿ 22-23 ಇವರಿಬ್ಬರ ವಿವಾಗ ನಿಶ್ಚಯವಾಗಿ ಸಾವಿರಾರು ಆಮಂತ್ರಣ ಪತ್ರಿಕೆಗಳನ್ನು ಹಂಚಿದ್ದರು. ಆದರೆ, ಕೊರೊನಾ ನಿಯಮ ಪಾಲಿಸುವ ಉದ್ದೇಶದಿಂದ ಸರಳ ವಿವಾಹ ನೆರವೇರಿಸಲು ನಿಶ್ವಯಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ