ETV Bharat / state

ಕಲಾಪಕ್ಕೆ ಹಾಜರಾಗುವ ಮುನ್ನ ಹೃದಯಾಘಾತ: ಕೋರ್ಟ್ ಆವರಣದಲ್ಲಿ ಚಾಮರಾಜನಗರ ನಗರಸಭಾ ಸದಸ್ಯ ಸಾವು - ಹೃದಯಾಘಾತದಿಂದ ಚಾಮರಾಜನಗರ ನಗರಸಭೆ ಸದಸ್ಯ ಮೃತ

ನ್ಯಾಯಾಲಯ ಕಲಾಪಕ್ಕೆ ಹಾಜರಾಗಲು ತೆರಳಿದ್ದ ನಗರಸಭಾ ಸದಸ್ಯರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

chamarajanagar-municipal-member-died-by-heart-attack
ಕಲಾಪಕ್ಕೆ ಹಾಜರಾಗುವ ಮುನ್ನ ಹೃದಯಾಘಾತ: ಕೊರ್ಟ್ ಆವರಣದಲ್ಲಿ ನಗರಸಭಾ ಸದಸ್ಯ ಸಾವು
author img

By

Published : Sep 1, 2021, 1:05 PM IST

Updated : Sep 1, 2021, 1:36 PM IST

ಚಾಮರಾಜನಗರ: ನ್ಯಾಯಾಲಯ ಕಲಾಪಕ್ಕೆ ಹಾಜರಾಗಲು ತೆರಳಿದ್ದ ವೇಳೆ ಹೃದಯಾಘಾತವಾಗಿ ನಗರಸಭಾ ಸದಸ್ಯರೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಇಂದು ನಡೆದಿದೆ.

ಚಾಮರಾಜನಗರ ನಗರಸಭೆಯ 6ನೇ ವಾರ್ಡಿನ ಸದಸ್ಯ ಸಮೀವುಲ್ಲಾ ಖಾನ್ (45) ಮೃತ ವ್ಯಕ್ತಿ. ಬಾಬರಿ ಮಸೀದಿ ಧ್ವಂಸ ದಿನದ ನೆನಪಿನಾರ್ಥ ಮೂರು ವರ್ಷಗಳ ಹಿಂದೆ ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿದ್ದರ ಸಂಬಂಧ ಸಮೀವುಲ್ಲಾ ಸೇರಿದಂತೆ 104 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರ ಕಲಾಪದಲ್ಲಿ ಭಾಗಿಯಾಗಲು ತೆರಳಿದ್ದ ವೇಳೆ ವಕೀಲರ ಜೊತೆ ಮಾತನಾಡಿದ ಸ್ವಲ್ಪ ಸಮಯದಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ.

ಸಮೀವುಲ್ಲಾ ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಗಾಗಲೇ ಸಾವನ್ನಪ್ಪಿದ್ದರು ಎಂದು ನಗರಸಭಾ ಸದಸ್ಯ ಗಾಳಿಪುರ ಮಹೇಶ್ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.

ಎಸ್​​ಡಿಪಿಐನಿಂದ ಆಯ್ಕೆಯಾಗಿದ್ದ ಸಮೀವುಲ್ಲಾ ಮಂಗಳವಾರವಷ್ಟೇ ನಗರಸಭೆ ಸಾಮಾನ್ಯ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆಡಳಿತ ಪಕ್ಷ ಹಾಗೂ ಸದಸ್ಯರ ವಿರುದ್ಧ ಕಿಡಿಕಾರಿದ್ದರು.

ಇದನ್ನೂ ಓದಿ: ಸಚಿವ ಪ್ರಭು ಚವ್ಹಾಣ್​ಗೆ ಮುತ್ತಿಗೆ ಹಾಕಲು ಯತ್ನ: ದಲಿತ ಸಂಘಟನೆ ಕಾರ್ಯಕರ್ತರ ಬಂಧನ

Last Updated : Sep 1, 2021, 1:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.