ETV Bharat / state

ಚಾಮರಾಜನಗರ: ಕರ್ತವ್ಯ ನಿರ್ವಹಣೆಯಲ್ಲಿ ವಿಫಲ; ಹುದ್ದೆಯಿಂದ ನಗರಸಭೆ ಆಯುಕ್ತ ಬಿಡುಗಡೆ

ಕರ್ತವ್ಯ ಲೋಪ ಆರೋಪದಡಿ ಚಾಮರಾಜನಗರ ಆಯುಕ್ತರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

muncipal commissioner suspende
ಕರ್ತವ್ಯ ಲೋಪ: ಹುದ್ದೆಯಿಂದ ನಗರಸಭೆ ಆಯುಕ್ತ ಅಮಾನತು
author img

By

Published : Jul 14, 2022, 9:10 AM IST

Updated : Jul 14, 2022, 10:04 AM IST

ಚಾಮರಾಜನಗರ: ಸಮರ್ಪಕವಾಗಿ ಕರ್ತವ್ಯ ನಿಭಾಯಿಸಲು ವಿಫಲರಾದ ನಗರಸಭೆ ಆಯುಕ್ತರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ. ಕರಿಬಸವಯ್ಯ ಆಯುಕ್ತರ ಹುದ್ದೆಯಿಂದ ಬಿಡುಗಡೆಗೊಂಡ ಅಧಿಕಾರಿ. ರಸ್ತೆ ಅಭಿವೃದ್ಧಿಗೆ ಭೂಸ್ವಾಧೀನ ಪ್ರಕ್ರಿಯೆ ನಡೆಸದಿರುವುದು, 14 ಮತ್ತು 15 ನೇ ಹಣಕಾಸಿನ ಯೋಜನೆಯ ಕಾಮಗಾರಿ ಅಪೂರ್ಣ, ಕುಡಿಯುವ ನೀರಿನ ಅಸಮರ್ಪಕ ಪೂರೈಕೆ ಹಾಗು ಇ-ಸ್ವತ್ತು ನಿರ್ವಹಣೆ ನಿರ್ಲಕ್ಷ್ಯದ ಬಗ್ಗೆ ಆಯುಕ್ತರ ವಿರುದ್ದ ಸಾಕಷ್ಟು ದೂರುಗಳು ಬಂದಿದ್ದವು.

ಸಹಾಯಕ ಕಾರ್ಯಪಾಲಕ ಅಭಿಯಂತರ ನಟರಾಜು ಅವರನ್ನು ಪ್ರಭಾರ ಆಯುಕ್ತರನ್ನಾಗಿ ನೇಮಿಸಲಾಗಿದೆ.‌ ಈ ಹಿಂದೆ ಕರ್ತವ್ಯ ಲೋಪವೆಸಗಿದ ನಗರಸಭೆಯ ಇಬ್ಬರು ನೌಕರರನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದರು.

ಇದನ್ನೂ ಓದಿ: ಮೈಸೂರು: ಮನೆಯಲ್ಲಿ ನವಿಲು ಸಾಕಿದ್ದ ವ್ಯಕ್ತಿ ಬಂಧನ

Last Updated : Jul 14, 2022, 10:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.