ETV Bharat / state

ಎನ್.ಮಹೇಶ್ ಸೂಚನೆ ಮೇರೆಗೆ ವ್ಯಕ್ತಿಗೆ ಪೊಲೀಸರಿಂದ ಥಳಿತ ಆರೋಪ - Chamarajanagar man beaten by police On the instruction of N Mahes

ಅಂಬೇಡ್ಕರ್ ಜಯಂತಿಯಂದು ಶಾಸಕ‌ ಎನ್. ಮಹೇಶ್ ಜೊತೆ ಸಿದ್ದರಾಜು ಆಕ್ರೋಶಗೊಂಡು ಮಾತನಾಡಿದ್ದರಂತೆ. ಇದಕ್ಕೆ ಕೋಪಗೊಂಡ ಶಾಸಕರು ಮಾಂಬಳ್ಳಿ ಪೊಲೀಸರಿಗೆ ಸೂಚಿಸಿ ಹಲ್ಲೆ ಮಾಡಿಸಿದ್ದಾರೆ ಎಂದು ಡಿಎಸ್ಎಸ್ ಮುಖಂಡರು ಆರೋಪ ಮಾಡಿದ್ದಾರೆ.

ಎನ್​ ಮಹೇಶ್ ಸೂಚನೆ ಮೇರೆಗೆ ವ್ಯಕ್ತಿಗೆ ಪೊಲೀಸರಿಂದ ಥಳಿತ ಆರೋಪ

author img

By

Published : Apr 15, 2022, 7:06 PM IST

Updated : Apr 15, 2022, 8:07 PM IST

ಚಾಮರಾಜನಗರ: ಸುಖಾಸುಮ್ಮನೆ ವ್ಯಕ್ತಿಯೊಬ್ಬನಿಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇವರ ಥಳಿತಕ್ಕೆ ಶಾಸಕ ಎನ್.ಮಹೇಶ್​ ಅವರೇ ಕಾರಣ ಎಂದು ಆರೋಪಿಸಲಾಗುತ್ತಿದೆ. ಈ ಘಟನೆ ಕೊಳ್ಳೇಗಾಲ ತಾಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ಜರುಗಿದೆ.

ಇದನ್ನೂ ಓದಿ: ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಪ್ರಹಸನ! : ಏನಿದು 40 % ಕಮಿಷನ್?

ಉತ್ತಂಬಳ್ಳಿ ಗ್ರಾಮದ ಸಿದ್ದರಾಜು(40) ಪೊಲೀಸರ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿ.‌ ಅಂಬೇಡ್ಕರ್ ಜಯಂತಿಯಂದು ಶಾಸಕ‌ ಎನ್. ಮಹೇಶ್ ಜೊತೆ ಸಿದ್ದರಾಜು ಆಕ್ರೋಶಗೊಂಡು ಮಾತನಾಡಿದ್ದರಂತೆ. ಇದಕ್ಕೆ ಕೋಪಗೊಂಡ ಶಾಸಕರು ಮಾಂಬಳ್ಳಿ ಪೊಲೀಸರಿಗೆ ಸೂಚಿಸಿ ಹಲ್ಲೆ ಮಾಡಿಸಿದ್ದಾರೆ ಎಂದು ಡಿಎಸ್ಎಸ್ ಮುಖಂಡ ಉತ್ತಂಬಳ್ಳಿ ಗ್ರಾಮದ ಲಿಂಗಣ್ಣ ಆರೋಪಿಸಿದ್ದಾರೆ. ಗಾಯಾಳು ಸಿದ್ದರಾಜು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಥಳಿಸಿರುವ ಆರೋಪವನ್ನು ಮಾಂಬಳ್ಳಿ ಪೊಲೀಸರು ತಳ್ಳಿಹಾಕಿದ್ದಾರೆ.

ಪ್ರತಿಭಟನೆ: ಘಟನೆ ಸಂಬಂಧ ಆಕ್ರೋಶ ಹೊರಹಾಕಿರುವ ಕುಟುಂಬಸ್ಥರು ಶಾಸಕರು ಹಾಗೂ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಕುಟುಂಬಸ್ಥರ ಜೊತೆ ಉತ್ತಂಬಳ್ಳಿ ಗ್ರಾಮಸ್ಥರು ಸಹ ಭಾಗಿಯಾಗಿದ್ದು, ನ್ಯಾಯಕ್ಕಾಗಿ ಆಗ್ರಹ ಮಾಡುತ್ತಿದ್ದಾರೆ.

Last Updated : Apr 15, 2022, 8:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.