ETV Bharat / state

ಸಂಕಷ್ಟದಲ್ಲಿ ಭತ್ತ ಬೆಳೆಯುವ ರೈತರಿಗೆ ನೆರವಾದ ಡ್ರಮ್ ಸೀಡರ್.. ನೀರು ಮತ್ತು ಹಣ ಉಳಿತಾಯ - Drum seeder saves money

ನಾವು ಸಾಂಪ್ರದಾಯಿಕ ನಾಟಿ ಮಾಡಿಕೊಂಡು ಹೆಚ್ಚು ಹಣವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದೆವು. ಅಲ್ಲದೆ ಸಮಯಕ್ಕೆ ಸರಿಯಾಗಿ ನಾಟಿ ಕಾರ್ಯಕ್ಕೆ ಕೂಲಿ ಕಾರ್ಮಿಕರು ಸಿಗುತ್ತಿರಲಿಲ್ಲ. ಈ ಪದ್ಧತಿಯಲ್ಲಿ ಭತ್ತ ಬೆಳೆಯಲು ಹೆಚ್ಚು ನೀರಿನ ಅವಶ್ಯಕತೆ ಇತ್ತು. ಆದರೆ, ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ.ಸುನಿಲ್ ಅವರು ಡ್ರಮ್ ಸೀಡರ್ ಪದ್ಧತಿಯನ್ನು ನಮಗೆ ಪರಿಚಯಿಸಿಕೊಟ್ಟಿದ್ದಾರೆ.

chamarajanagar farmers using Drum seeder to paddy cultivation
ಭತ್ತ ಬೆಳೆಯಲು ಡ್ರಮ್​ ಸೀಡರ್​ ಪದ್ಧತಿ
author img

By

Published : Sep 7, 2021, 6:54 PM IST

Updated : Sep 7, 2021, 7:40 PM IST

ಚಾಮರಾಜನಗರ : ಸಮಯಕ್ಕೆ ಸರಿಯಾಗಿ ಕೂಲಿ ಕಾರ್ಮಿಕರು ಸಿಗದೆ ಸಿಕ್ಕಂತಹ ಕಾರ್ಮಿಕರೊಂದಿಗೆ ದುಬಾರಿ ವೆಚ್ಚದಲ್ಲಿ ಸಾಂಪ್ರದಾಯಿಕ ನಾಟಿ ಪದ್ಧತಿ ಮಾಡಿಕೊಂಡು ನೀರು, ಸಮಯ ಹಾಗೂ ಇಳುವರಿಯನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದ ರೈತರಿಗೆ ಕೃಷಿ ವಿಜ್ಞಾನ ಕೇಂದ್ರ ಪರಿಚಯಿಸಿಕೊಟ್ಟ 'ಡ್ರಮ್‌ ಸೀಡರ್‌’ ನಾಟಿ ಪದ್ಧತಿ ನೆರವಾಗಿದೆ.

ಭತ್ತ ಬೆಳೆಯಲು ಡ್ರಮ್​ ಸೀಡರ್​

ಸಾಕಷ್ಟು ಮಳೆಯೊಂದಿಗೆ ಭತ್ತದ ಜಮೀನಿಗಿಳಿದಿರುವ ರೈತರು ಸಸಿಮಡಿಗಳ ನಿರ್ಮಾಣ, ಗದ್ದೆ ನಾಟಿಯ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆದರೆ, ಯಳಂದೂರು ತಾಲೂಕಿನ ಕಟ್ನವಾಡಿ ಗ್ರಾಮದ ರೈತ ಮಾತ್ರ ಹಳೆ ಸಾಂಪ್ರದಾಯಿಕ ನಾಟಿ ಪದ್ಧತಿಗೆ ಮಂಗಳ ಹಾಡಿ ‘ಡ್ರಮ್‌ ಸೀಡರ್‌’ ಎಂಬ ಹೊಸ ನಾಟಿ ಪದ್ಧತಿಯತ್ತ ಮುಖ ಮಾಡಿದ್ದು, ಏಳೆಂಟು ಜನರು ಮಾಡುವ ನಾಟಿ ಕೆಲಸವನ್ನು ಒಬ್ಬರೆ ಮಾಡುತ್ತಿದ್ದಾರೆ.

ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ.ಸುನಿಲ್ ಅವರು ಜಿಲ್ಲೆಗೆ ‘ಡ್ರಮ್‌ ಸೀಡರ್‌’ ನಾಟಿ ಪದ್ಧತಿ ಪರಿಚಯಿಸಿದ್ದಾರೆ. ಈ ಪದ್ಧತಿಯಲ್ಲಿ ಸಸಿಮಡಿ ನಿರ್ಮಾಣ, ಸಸಿ ಕಿತ್ತು ನಾಟಿ ಮಾಡುವ ಪದ್ಧತಿಗಳಿಲ್ಲದ ಕಾರಣ ಭತ್ತದ ಕೃಷಿಯ ವೆಚ್ಚ ತಗ್ಗಿಸಲು ‘ಡ್ರಮ್‌ ಸೀಡರ್‌’ ನಾಟಿ ಪದ್ಧತಿಯು ರೈತರಿಗೆ ನೆರವಾಗುತ್ತಿದೆ.

ಡ್ರಮ್‌ ಸೀಡರ್‌ ಪದ್ಧತಿ ಅಂದರೆ..

ಮೊಳಕೆಯೊಡೆದ ಭತ್ತವನ್ನು ಕೈ ಯಂತ್ರದ ಮೂಲಕ ನೇರವಾಗಿ ಬಿತ್ತನೆ ಮಾಡುವ ಪದ್ಧತಿಯನ್ನೇ ಡ್ರಮ್‌ ಸೀಡರ್‌ ಪದ್ಧತಿ ಎನ್ನಲಾಗುತ್ತದೆ. ನಾಲ್ಕು ಡ್ರಮ್‌ಗಳನ್ನು ಒಳಗೊಂಡ ಎರಡು ಚಕ್ರದ ಗಾಡಿಯಂತಹ ಯಂತ್ರದೊಳಗೆ ಮೊಳಕೆ ಬಂದ ಭತ್ತಗಳನ್ನು ಹಾಕಿ, ಭತ್ತದ ಗದ್ದೆಯಲ್ಲಿ ಈ ಯಂತ್ರವನ್ನು ಕೈಯಿಂದ ಎಳೆಯುವ ಮೂಲಕ, ನಾಟಿ ಮಾಡುವುದು ಈ ಪದ್ಧತಿಯ ವಿಶೇಷ. ಪ್ರತಿ ಎಕರೆಗೆ ಬಿತ್ತನೆ ಮಾಡಲು 14-15 ಕೆಜಿ ಬಿತ್ತನೆ ಬೀಜ ಬಳಸುತ್ತಿದ್ದ ರೈತರಿಗೆ ಡ್ರಮ್ ಸೀಡರ್ ಪದ್ಧತಿಯಲ್ಲಿ ಒಂದು ಎಕರೆಗೆ ಕೇವಲ 10 ಕೆಜಿ ಬಿತ್ತನೆ ಬೀಜ ಸಾಕಾಗಲಿದೆ.

ಒಂದೇ ಪ್ರಮಾಣದಲ್ಲಿ ನಾಟಿ :

ಮೊಳಕೆಯೊಡೆದ ಬೀಜದ ಭತ್ತವನ್ನು ಡ್ರಮ್‌ ಸೀಡರ್‌ ಯಂತ್ರದಲ್ಲಿರುವ ನಾಲ್ಕು ಡ್ರಮ್‌ಗಳಿಗೆ ಮುಕ್ಕಾಲು ಭಾಗದಷ್ಟು ಸಮನಾಗಿ ತುಂಬಿ, ಭತ್ತವು ಚೆಲ್ಲದಂತೆ ಯಂತ್ರದಲ್ಲಿರುವ ಕೀಲಿಯನ್ನು ಭದ್ರಪಡಿಸಿಕೊಂಡು, ನಾಟಿಗಾಗಿ ಸಿದ್ಧವಾಗಿರುವ ಭತ್ತದ ಗದ್ದೆಯಲ್ಲಿ ಯಂತ್ರವನ್ನು ಎಳೆಯಬೇಕು. ಯಂತ್ರದ ಡ್ರಮ್‌ಗಳಲ್ಲಿರುವ ಕಿಂಡಿಗಳ ಮೂಲಕ ಮೊಳಕೆಯೊಡೆದ ಭತ್ತವು ಜಮೀನಿಗೆ ನಿಗದಿತ ಪ್ರಮಾಣದಲ್ಲಿ ಬಿದ್ದು ಬಿತ್ತನೆಯಾಗುತ್ತದೆ. ಯಂತ್ರದಲ್ಲಿರುವ ಚಕ್ರದ ಗುರುತಿನಲ್ಲಿಯೇ ಚಲಿಸಿದಾಗ ಇಡೀ ಗದ್ದೆಯು ಒಂದೇ ಪ್ರಮಾಣದಲ್ಲಿ ನಾಟಿಯಾಗುತ್ತದೆ.

ವೆಚ್ಚ ಕಡಿಮೆ :

ಈ ಪದ್ಧತಿಯನ್ನು ಅನುಸರಿಸುವುದರಿಂದ ಸಸಿ ಮಡಿ ನಿರ್ಮಾಣ ವೆಚ್ಚ ಸಂಪೂರ್ಣ ಕಡಿತವಾಗುತ್ತದೆ. ಡ್ರಮ್‌ ಸೀಡರ್‌ ಯಂತ್ರದ ಕಿಂಡಿಗಳ ಮೂಲಕ ನಾಟಿ ಮಾಡುವುದರಿಂದ ನಿಗದಿತ ಅಂತರದಲ್ಲಿ ಬಿತ್ತನೆಯಾಗಿ ಇಳುವರಿ ಹೆಚ್ಚಲು ಸಾಧ್ಯವಾಗುತ್ತದೆ. ಈ ಪದ್ಧತಿಯಲ್ಲಿ ಕಡಿಮೆ ನೀರಿದ್ದರೂ ನಾಟಿ ಮಾಡಲು ಸಾಧ್ಯವಾಗುತ್ತದೆ. ಈ ಪದ್ಧತಿಯಲ್ಲಿ ನಾಟಿ ಮಾಡಲು ಕಡಿಮೆ ಕಾರ್ಮಿಕರು ಸಾಕಾಗುವುದರಿಂದ, ಕಾರ್ಮಿಕರ ಕೊರತೆ ಎದುರಿಸಲು ಈ ಪದ್ಧತಿ ಸೂಕ್ತವಾಗಿದೆ.

ಕೃಷಿ ವಿಜ್ಞಾನಿಗಳು ಏನಂತಾರೆ..

ಈ ಪದ್ಧತಿಯಲ್ಲಿ ಒಬ್ಬ ವ್ಯಕ್ತಿ ಒಂದು ದಿನಕ್ಕೆ 2.5 ಎಕರೆ ಪ್ರದೇಶವನ್ನು ಸುಲಭವಾಗಿ ನಾಟಿ ಮಾಡಬಹುದಾಗಿದೆ. ನಾಟಿಯ ನಂತರ ನಡೆಯುವ ಕಳೆ ಕೀಳುವುದು, ಗೊಬ್ಬರ ಹಾಕುವುದು ಮುಂತಾದ ಕಾರ್ಯಗಳಿಗೂ ಈ ಪದ್ಧತಿ ಅನುಕೂಲವಾಗುವುದಲ್ಲದೇ, ಕಟಾವಿನ ವೇಳೆ ಯಂತ್ರ ಬಳಕೆಗೂ ನೆರವಾಗುತ್ತದೆ. ಈ ಪದ್ಧತಿಯನ್ನು ಅನುಸರಿಸಿದರೆ ಸಾಂಪ್ರದಾಯಿಕ ಪದ್ಧತಿಗಿಂತ ಶೇ. 40 ರಿಂದ ಶೇ.50ರಷ್ಟು ವೆಚ್ಚ ತಗ್ಗಿಸಲು ಸಾಧ್ಯ ಮತ್ತು ಹತ್ತು ದಿನ ಮುಂಚಿತವಾಗಿಯೇ ಕಟಾವಿಗೆ ಬರಲಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿ ಡಾ.ಸುನಿಲ್.

ಒಂದು ಎಕರೆಗೆ 5 ಸಾವಿರ ರೂ. ಉಳಿತಾಯ :

ನಾವು ಸಾಂಪ್ರದಾಯಿಕ ನಾಟಿ ಮಾಡಿಕೊಂಡು ಹೆಚ್ಚು ಹಣವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದೆವು. ಅಲ್ಲದೆ ಸಮಯಕ್ಕೆ ಸರಿಯಾಗಿ ನಾಟಿ ಕಾರ್ಯಕ್ಕೆ ಕೂಲಿ ಕಾರ್ಮಿಕರು ಸಿಗುತ್ತಿರಲಿಲ್ಲ. ಈ ಪದ್ಧತಿಯಲ್ಲಿ ಭತ್ತ ಬೆಳೆಯಲು ಹೆಚ್ಚು ನೀರಿನ ಅವಶ್ಯಕತೆ ಇತ್ತು. ಆದರೆ, ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ.ಸುನಿಲ್ ಅವರು ಡ್ರಮ್ ಸೀಡರ್ ಪದ್ಧತಿಯನ್ನು ನಮಗೆ ಪರಿಚಯಿಸಿಕೊಟ್ಟಿದ್ದಾರೆ.

ಇದರಿಂದ ನಮಗೆ ನಾಟಿ ಕೆಲಸ ಬೇಗವಾಗುತ್ತಿದೆ. ಒಂದು ಎಕರೆಗೆ 5 ಸಾವಿರ ರೂ. ಉಳಿತಾಯವಾಗುತ್ತಿದೆ. ಬಿತ್ತನೆ ಬೀಜದ ಉಳಿತಾಯವಾಗುತ್ತಿದೆ. ಒಂದು ಎಕರೆ ನಾಟಿ ಕಾರ್ಯಕ್ಕೆ 9-10 ಜನರು ಬೇಕಾಗುತ್ತಿತ್ತು. ಆದರೆ, ಡ್ರಮ್ ಸೀಡರ್‌ನಿಂದ ಒಂದು ದಿನಕ್ಕೆ ಒಬ್ಬ ವ್ಯಕ್ತಿಯೇ ಎರಡು ಎಕರೆ ನಾಟಿ ಮಾಡಬಹುದಾಗಿದೆ. ಡ್ರಮ್ ಸೀಡರ್ ಉತ್ತಮ ವಿಧಾನವಾಗಿದೆ ಎನ್ನುತ್ತಾರೆ ರೈತ ಪುಟ್ಟಸ್ವಾಮಿ.‌ ಸಮಯ, ಹಣ ಉಳಿತಾಯದೊಂದಿದೆ ನೀರು ಪೋಲಾಗುವುದನ್ನು ತಡೆಯುವ ಈ ಪದ್ಧತಿಯತ್ತ ಜಿಲ್ಲೆಯ ಹೆಚ್ಚಿನ ರೈತರು ಮುಖ ಮಾಡಿದ್ದಾರೆ.

Last Updated : Sep 7, 2021, 7:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.