ETV Bharat / state

ಗ್ರಾಮದಲ್ಲಿ ದೌರ್ಜನ್ಯ.. ಪೊಲೀಸರಿಂದ ಸಿಗದ ನ್ಯಾಯ: ದಯಾಮರಣಕ್ಕೆ ಮೊರೆ - Chamarajanagar

ನಮಗೆ ದಯಾಮರಣ ಕೊಡಿ ಇಲ್ಲವೇ, ನ್ಯಾಯ ಕೊಡಿ ಎಂದು ಗುಂಡ್ಲುಪೇಟೆ ತಾಲೂಕಿನ ಮಾಡ್ರಹಳ್ಳಿ ಗ್ರಾಮದ ಕುಟುಂಬವೊಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.

Chamarajanagar
ದಯಾಮರಣಕ್ಕೆ ಮೊರೆ
author img

By

Published : Jun 23, 2021, 2:39 PM IST

ಚಾಮರಾಜನಗರ: ಗ್ರಾಮದಲ್ಲಿ ತಮ್ಮ‌ ಮೇಲೆ ನಿರಂತರ ದೌರ್ಜನ್ಯವೆಸಗಲಾಗುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಬದುಕಲಾಗುತ್ತಿಲ್ಲ ಎಂದು ಕುಟುಂಬವೊಂದು ದಯಾಮರಣಕ್ಕೆ ಮೊರೆ ಇಟ್ಟಿದೆ.

ದಯಾಮರಣಕ್ಕೆ ಮೊರೆ ಇಟ್ಟ ಕುಟುಂಬ..

ಗುಂಡ್ಲುಪೇಟೆ ತಾಲೂಕಿನ ಮಾಡ್ರಹಳ್ಳಿ ಗ್ರಾಮದ ಮಹಾದೇವಮ್ಮ, ನವೀನ್ ಹಾಗೂ ಮಾದಪ್ಪ ಎಂಬ ತಾಯಿ ಮಕ್ಕಳು ತಮಗೆ ದಯಾಮರಣ ಕೊಡಿ ಇಲ್ಲವೇ, ನ್ಯಾಯ ಕೊಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಅಳಲು ತೋಡಿಕೊಂಡಿದ್ದಾರೆ.

ಏನಿದು ಆರೋಪ:

ಮಹಾದೇವಮ್ಮ ಅವರ ಕುಟುಂಬಕ್ಕೆ 3 ಎಕರೆ ಜಮೀನಿದ್ದು ಅದೇ ಗ್ರಾಮದ ಎಲ್. ಮಾದಪ್ಪ ಹಾಗೂ ನಾಗೇಂದ್ರ ಎಂಬುವರು ದಬ್ಬಾಳಿಕೆ ನಡೆಸಿ ಕೃಷಿ ಚಟುವಟಿಕೆ ನಡೆಸಲು ಬಿಡದೆ ಕೊಲೆ ಬೆದರಿಕೆ ಹಾಕುತ್ತಿದ್ದಾರಂತೆ. ಕೆಲ ತಿಂಗಳುಗಳ ಹಿಂದೆ ಗುಂಪು ಕಟ್ಟಿಕೊಂಡು ಹಲ್ಲೆ ಸಹ ನಡೆಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಗುಂಡ್ಲುಪೇಟೆ ಠಾಣೆ, ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಕೊಟ್ಟು 3-4 ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಈ ಕುಟುಂಬ ಆರೋಪಿಸಿದೆ.

chamarajanagar
ದಯಾಮರಣಕ್ಕೆ ಮೊರೆ ಇಟ್ಟ ಕುಟುಂಬ

ದಯಾಮರಣಕ್ಕೆ ಅರ್ಜಿ ಸಲ್ಲಿಸುವ ಮೂಲಕ ಪ್ರಕರಣದ ಗಂಭೀರತೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ.

ಓದಿ: ಜಾತಿವಾರು ನಿಗಮ-ಮಂಡಳಿ ಪ್ರಶ್ನಿಸಿರುವ ಪಿಐಎಲ್​ಗಳು ರಾಜಕೀಯಪ್ರೇರಿತ: ಹೈಕೋರ್ಟ್​ನಲ್ಲಿ ಸರ್ಕಾರದ ವಾದ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.