ETV Bharat / state

ಹೊಸವರ್ಷಕ್ಕೆ ಸಿಗಲ್ಲ ಬಂಡೀಪುರ ವಸತಿಗೃಹ: ಖಾಸಗಿ ರೆಸಾರ್ಟ್​ಗಳೂ ಪಾಲಿಸಬೇಕಿದೆ ಹಲವು ನಿಯಮ! - ಚಾಮರಾಜನಗರ ಬಂಡೀಪುರ ಅರಣ್ಯ

ಡಿಸೆಂಬರ್​ 30, 31, 01 ಈ ಮೂರು ದಿನಗಳು ಬಂಡೀಪುರ ವಸತಿಗೃಹವನ್ನು ಪ್ರವಾಸಿಗರಿಗೆ ನೀಡದಿರಲು ಅರಣ್ಯ ಇಲಾಖೆ ನಿರ್ಧರಿಸಿದೆ.

Chamarajanagar: Bandipura residence is not available during year end
ಹೊಸವರ್ಷಕ್ಕೆ ಸಿಗಲ್ಲ ಬಂಡೀಪುರ ವಸತಿಗೃಹ... ಖಾಸಗಿ ರೆಸಾರ್ಟ್​ಗಳೂ ಪಾಲಿಸಬೇಕಿದೆ ಹಲವು ನಿಯಮ!
author img

By

Published : Dec 28, 2019, 12:45 PM IST

ಚಾಮರಾಜನಗರ: ಈ ತಿಂಗಳ ಕೊನೆ ದಿನಗಳನ್ನು ಬಂಡೀಪುರ ವಸತಿಗೃಹದಲ್ಲಿ ಕಳೆದು ನೂತನ ವರ್ಷಾರಂಭವನ್ನು ಆಚರಿಸಬೇಕೆನ್ನುವ ಪ್ರವಾಸಿಗರಿಗೆ ನಿರಾಸೆ ಕಾದಿದೆ.

ಹೊಸವರ್ಷಕ್ಕೆ ಸಿಗಲ್ಲ ಬಂಡೀಪುರ ವಸತಿಗೃಹ... ಖಾಸಗಿ ರೆಸಾರ್ಟ್​ಗಳೂ ಪಾಲಿಸಬೇಕಿದೆ ಹಲವು ನಿಯಮ!

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕ್ಯಾಂಪಸ್ಸಿನಲ್ಲಿರುವ ವಸತಿಗೃಹಗಳಲ್ಲಿ ನೂತನ ವರ್ಷಾಚರಣೆಯ ನೆಪದಲ್ಲಿ ಕದ್ದುಮುಚ್ಚಿ ಅನವಶ್ಯಕ ಮೋಜು-ಮಸ್ತಿ ನಡೆಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್​ 30, 31, 01 ಈ ಮೂರು ದಿನಗಳು ಪ್ರವಾಸಿಗರಿಗೆ ವಸತಿಗೃಹಗಳನ್ನು ನೀಡದಿರಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಕಳೆದ ವರ್ಷವೂ ಡಿ.31 ರಂದು ವಸತಿಗೃಹಗಳನ್ನು ಪ್ರವಾಸಿಗರಿಗೆ ನೀಡದೇ ವಾಸ್ತವ್ಯವನ್ನು ನಿರ್ಬಂಧಿಸಲಾಗಿತ್ತು. ಇಲ್ಲಿ ಒಟ್ಟು 19 ವಸತಿ ಗೃಹಗಳಿದ್ದು, ವಾರಾಂತ್ಯಗಳಲ್ಲಿ ಮತ್ತು ವಿಶೇಷ ದಿನಗಳಲ್ಲಿ ಭಾರೀ ಬೇಡಿಕೆ ಇರುತ್ತದೆ.

ಖಾಸಗಿ ರೆಸಾರ್ಟ್ ಗಳಿಗೂ ಹಲವು ನಿರ್ಬಂಧಗಳು:

ಹೊಸ ವರ್ಚಾಚರಣೆಗೆ ಇನ್ನೂ ಒಂದು ವಾರವಿದೆ ಎನ್ನುವಾಗಲೇ ಗುಂಡ್ಲುಪೇಟೆ, ಬಂಡೀಪುರ ಸುತ್ತಮುತ್ತಲಿನ ಹೋಟೆಲ್​ಗಳು, ರೆಸಾರ್ಟ್ ಗಳು ಬುಕ್‌ ಆಗಿ ತುಂಬಿ ತುಳುಕುತ್ತಿವೆ. ದುಪ್ಪಟ್ಟು ಹಣ ನೀಡುತ್ತೇವೆಂದು ಕೆಲ ಪ್ರವಾಸಿಗರು ದುಂಬಾಲು ಬಿದ್ದರೂ ಕೊಠಡಿ ನೀಡಲಾಗದ ಸ್ಥಿತಿಯಲ್ಲಿ ರೆಸಾರ್ಟ್ ಮಾಲೀಕರಿದ್ದಾರೆ. ಹೊಸ ವರ್ಷಾರಂಭದ ಮೂಡಿನಲ್ಲಿರುವ ಪ್ರವಾಸಿಗರಿಗೆ ಮನರಂಜನೆ ನೀಡುವ ಭರದಲ್ಲಿ ವನ್ಯಪ್ರಾಣಿಗಳಿಗೆ ತೊಂದರೆಯಾಗದಿರಲೆಂದು ಅರಣ್ಯ ಇಲಾಖೆ ಹಲವು ನಿಯಮಗಳು ವಿಧಿಸಿದ್ದು, ಅವು ಇಂತಿವೆ.

1. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಆಜುಬಾಜುಗಳಲ್ಲಿರುವ 12 ರೆಸಾರ್ಟ್ ಗಳಲ್ಲಿ ಧ್ವನಿವರ್ಧಕ ಬಳಸುವುದು ಮತ್ತು ಸಂಗೀತ ಕಾರ್ಯಕ್ರಮ ನಡೆಸುವಂತಿಲ್ಲ.
2. ರೆಸಾರ್ಟ್ ಗಳಲ್ಲಿ ಪ್ಲಢ್ ಲೈಟ್ ಮತ್ತು ಫೋಕಸ್ ಲೈಟ್ ಬಳಸುವಂತಿಲ್ಲ
3. ಫೈರ್ ಕ್ಯಾಂಪ್ ಹಾಕುವಂತಿಲ್ಲ.
4. ವನ್ಯಜೀವಿಗಳಿಗೆ ಯಾವುದೇ ಧಕ್ಕೆ ಆಗದಂತೆ, ಒತ್ತಡ ಬೀಳದಂತೆ ನಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಜರುಗಿಸುವುದಾಗಿ ಅರಣ್ಯ ಇಲಾಖೆ ಎಚ್ಚರಿಸಿದೆ.

Intro:ಹೊಸವರ್ಷಕ್ಕೆ ಸಿಗಲ್ಲ ಬಂಡೀಪುರ ವಸತಿಗೃಹ... ಖಾಸಗಿ ರೆಸಾರ್ಟ್ ಗಳೂ ಪಾಲಿಸಬೇಕಿದೆ ಹಲವು ನಿಯಮ!

ಚಾಮರಾಜನಗರ: ಸುತ್ತಣ ಕಾನನ, ಚುಮುಚುಮ ಚಳಿಯಲ್ಲಿನ ಬಂಡೀಪುರ ವಸತಿಗೃಹದಲ್ಲಿ ನೂತನ ವರ್ಷಾರಂಭವನ್ನು ಆಚರಿಸಬೇಕೆನ್ನುವ ಪ್ರವಾಸಿಗರಿಗೆ ನಿರಾಸೆ ಕಾದಿದೆ.

Body:ಹೌದು, ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕ್ಯಾಂಪಸ್ಸಿನಲ್ಲಿರುವ ವಸತಿಗೃಹಗಳಲ್ಲಿ ನೂತನ ವರ್ಷಾಚರಣೆಯ ನೆಪದಲ್ಲಿ ಕದ್ದುಮುಚ್ಚಿ ಮೋಜು-ಮಸ್ತಿ ಆಗುವ ಹಿನ್ನೆಲೆಯಲ್ಲಿ ಡಿ.೩೧ ರಾತ್ರಿ ಪ್ರವಾಸಿಗರಿಗೆ ವಸತಿಗೃಹಗಳನ್ನು ನೀಡದಿರಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಕಳೆದ ವರ್ಷವೂ ಡಿ.೩೧ ರಂದು ವಸತಿಗೃಹಗಳನ್ನು ಪ್ರವಾಸಿಗರಿಗೆ ನೀಡದೇ ವಾಸ್ತವ್ಯವನ್ನು ನಿರ್ಬಂಧಿಸಲಾಗಿತ್ತು. 19 ವಸತಿಗೃಹಗಳಿದ್ದು ವೀಕೆಂಡ್ ಮತ್ತು ವಿಶೇಷ ದಿನಗಳಲ್ಲಿ ಬಾರೀ ಬೇಡಿಕೆ ಇರುತ್ತದೆ.

ಖಾಸಗಿ ರೆಸಾರ್ಟ್ ಗಳಿಗೆ ಹಲವು ನಿರ್ಬಂಧ: ಹೊಸ ವರ್ಚಾಚರಣೆಗೆ ಇನ್ನೂ ಒಂದು ವಾರಯಿದೆ ಎನ್ನುವಾಗಲೇ ಗುಂಡ್ಲುಪೇಟೆ, ಬಂಡೀಪುರ ಸುತ್ತಮುತ್ತಲಿನ ಹೋಟೆಲ್ ಗಳು, ರೆಸಾರ್ಟ್ ಗಳು ಬುಕ್ಕಿಂಗ್ ಆಗಿ ತುಂಬಿ ತುಳುಕುತ್ತಿವೆ. 2 ಪಟ್ಟು ಹಣ ನೀಡುತ್ತೇವೆಂದು ಕೆಲ ಪ್ರವಾಸಿಗರು ದುಂಬಾಲು ಬಿದ್ದರೂ ಕೊಠಡಿ ನೀಡಲಾಗದ ಸ್ಥಿತಿಯಲ್ಲಿ ರೆಸಾರ್ಟ್ ಮಾಲೀಕರಿದ್ದಾರೆ. ಹೊಸ ವರ್ಷಾದರಂಭದ ಮೂಡಿನಲ್ಲಿರುವ ಪ್ರವಾಸಿಗರಿಗೆ ಮನರಂಜನೆ ನೀಡುವ ಭರದಲ್ಲಿ ವನ್ಯಪ್ರಾಣಿಗಳಿಗೆ ತೊಂದರೆಯಾಗದಿರಲೆಂದು ಅರಣ್ಯ ಇಲಾಖೆ ಹಲವು ನಿಯಮಗಳು ವಿಧಿಸಿದೆ.

Conclusion:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಆಜುಬಾಜುಗಳಲ್ಲಿರುವ 12 ರೆಸಾರ್ಟ್ ಗಳಲ್ಲಿ ಧ್ವನಿವರ್ಧಕ ಬಳಸುವುದು ಮತ್ತು ಸಂಗೀತ ಕಾರ್ಯಕ್ರಮ ನಡೆಸುವಂತಿಲ್ಲ, ರೆಸಾರ್ಟ್ ಗಳಲ್ಲಿ ಪ್ಲಢ್ ಲೈಟ್ ಮತ್ತು ಫೊಕಸ್ ಲೈಟ್ ಬಳಸುವಂತಿಲ್ಲ, ಫೈರ್ ಕ್ಯಾಂಪ್ ಹಾಕುವಂತಿಲ್ಲ ಜೊತೆಗೆ ವನ್ಯಜೀವಿಗಳಿಗೆ ಯಾವುದೇ ಧಕ್ಕೆ ಆಗದಂತೆ, ಒತ್ತಡ ಬೀಳದಂತೆ ನಡೆದುಕೊಳ್ಳಬೇಕು ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಜರುಗಿಸುವುದಾಗಿ ಅರಣ್ಯ ಇಲಾಖೆ ಎಚ್ಚರಿಸಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.