ಚಾಮರಾಜನಗರ: ಗುತ್ತಿಗೆದಾರನಿಂದ 20 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟ ನಗರಸಭೆ ಎಇಇ, ಎಸಿಬಿ ಬಲೆಗೆ ಬಿದ್ದಿದ್ದಾರೆ.
ಸತ್ಯಮೂರ್ತಿ, ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಶೋಯಬ್ ಖಾನ್ ಎಂಬ ಗುತ್ತಿಗೆದಾರನಿಗೆ ಎಸ್ಎಫ್ಡಿ ಹಣ ಬಿಡುಗಡೆ ಮಾಡಲು 20 ಸಾವಿರ ರೂ. ಲಂಚ ಕೇಳಿದ್ದರು ಎನ್ನಲಾಗಿದೆ.
ಈ ಕುರಿತು ಶೋಯಬ್ ಖಾನ್ ಎಸಿಬಿಗೆ ದೂರು ನೀಡಿದ್ದು, ಇಂದು ಹಣ ನೀಡುವ ನೆಪದಲ್ಲಿ ಎಇಇಯನ್ನು ಸಿಕ್ಕಿ ಬೀಳಿಸಿದ್ದಾರೆ. ಎಸಿಬಿ ಡಿವೈಎಸ್ಪಿ ಸದಾನಂದ ತಿಪ್ಪಣ್ಣ, ಸಿಪಿಐ ಶ್ರೀಕಾಂತ್, ದೀಪಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.