ETV Bharat / state

ಮಚ್ಚು ತೋರಿಸಿ ಚಿನ್ನ ದರೋಡೆ : ಮೂರೇ ದಿನದಲ್ಲಿ ಎರಡನೇ ಪ್ರಕರಣ - latest chamarajnagar news

ಚಾಮರಾಜನಗರದಲ್ಲಿ ಮಹಿಳೆಯಬ್ಬರಿಗೆ ಮಚ್ಚು ತೋರಿಸಿ ಚಿನ್ನ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

chain snatching
ಮಚ್ಚು ತೋರಿಸಿ ಮಾಸ್ಕ್ ಧಾರಿಗಳಿಂದ ಚಿನ್ನ ದರೋಡೆ
author img

By

Published : May 29, 2020, 9:40 PM IST

ಚಾಮರಾಜನಗರ : ಕುದೇರಿನಲ್ಲಿ ಇತ್ತೀಚೆಗೆ ನಡೆದ ಸರಗಳ್ಳತನ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿಂದು ಮತ್ತೊಂದು ಕಳ್ಳತನ ಪ್ರಕರಣ ನಡೆದಿದೆ. ಮಹಿಳೆಯಬ್ಬರಿಗೆ ಮೂವರು ಮಾಸ್ಕ್ ಧಾರಿಗಳು ಮಚ್ಚು ತೋರಿಸಿ ಚಿನ್ನ ದರೋಡೆ ಮಾಡಿದ್ದಾರೆ.

ನಗರದ ಸೋಮವಾರಪೇಟೆ ಬಡಾವಣೆಯ ನೀಲಮ್ಮ ಚಿನ್ನ ಕಳೆದುಕೊಂಡ ಮಹಿಳೆ. ಕರಿನಂಜನಪುರದಲ್ಲಿನ ತನ್ನ ಅಳಿಯನ ಮನೆಯಿಂದ ಸೋಮವಾರಪೇಟೆ ಮನೆಗೆ ತೆರಳಬೇಕಾದರೇ ಮೂವರು ಮಾಸ್ಕ್ ಧಾರಿಗಳು ಮಚ್ಚು ತೋರಿಸಿ ಸರ, ತಾಳಿ, ಓಲೆ ಹಾಗೂ ಗುಂಡುಗಳನ್ನು ಬಿಚ್ಚಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

3 ದಿನಗಳ ಹಿಂದೆಯಷ್ಟೇ ಕುದೇರಿನಲ್ಲಿ ಮಚ್ಚಿನಿಂದ ಹಲ್ಲೆ ಮಾಡಿ ಸರಗಳ್ಳತನ ಮಾಡಿದ್ದ ಖದೀಮರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ‌.

ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.