ETV Bharat / state

ಬೈಕ್‌-ಕಾರು ಡಿಕ್ಕಿ: ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಸಾವು

ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

Bike rider died in kollegal
ಕಾರು ಡಿಕ್ಕಿ: ಬೈಕ್​ ಸವಾರ ಸಾವು
author img

By

Published : Jan 6, 2021, 8:03 PM IST

ಕೊಳ್ಳೇಗಾಲ: ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಗಾಯಗೊಂಡಿದ್ದ ವ್ಯಕ್ತಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾನೆ.

ಕೊಳ್ಳೆಗಾಲ ತಾಲ್ಲೂಕಿನ ಕುಂತೂರು ಬಸವಣ್ಣ (56) ಮೃತ ವ್ಯಕ್ತಿ. ಈತ ಜ.5 ರಂದು ಬೈಕ್‌ನಲ್ಲಿ ಯರಿಯೂರು ಗ್ರಾಮದಿಂದ ಕುಂತೂರು ಗ್ರಾಮಕ್ಕೆ ಹಿಂತಿರುವಾಗ ಮೈಸೂರಿನಿಂದ ಬರುತ್ತಿದ್ದ ಕಾರೊಂದು ತಾಲ್ಲೂಕಿನ ಚಿಲಕವಾಡಿ ಬೆಟ್ಟ ಸಮೀಪದ ಕುಂತೂರು ಫ್ಯಾಕ್ಟರಿಯ ಮುಖ್ಯರಸ್ತೆಯಲ್ಲಿ ಬಳಿ ಬೈಕ್​ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಬೈಕ್ ಸವಾರನಿಗೆ ತಲೆ, ಕಾಲಿಗೆ ತೀವ್ರ ಪೆಟ್ಟಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಬೈಕ್ ಸವಾರ ಕೊನೆಯುಸಿರೆಳೆದಿದ್ದಾನೆ. ಪೊಲೀಸರು ಅಪಘಾತದಲ್ಲಿದ್ದ ಎರಡು ವಾಹನಗಳನ್ನು ಠಾಣಾ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.