ETV Bharat / state

Watch video: ನೀನಾ, ನಾನಾ? ನಡುರಸ್ತೆಯಲ್ಲೇ ಗೂಳಿಗಳ ಗುದ್ದಾಟ..ಬೈಕ್ ತುಳಿದು, ಕಾರಿನ ಮೇಲೆ ನೆಗೆತ! - ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ

ನಡುರಸ್ತೆಯಲ್ಲೇ ಎರಡು ಗೂಳಿಗಳು ನಾನಾ.. ನೀನಾ?.. ನೋಡೇ ಬಿಡೋಣ ಅಂತಾ ಗುದ್ದಾಟಕ್ಕೆ ನಿಂತಿದ್ದವು. ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಸಮೀಪ ಈ ಘಟನೆ ನಡೆದಿದೆ.

Bull fight in street at Chamarajanagar
ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಳಿ ಕಾಳಗ
author img

By

Published : Feb 8, 2022, 10:08 AM IST

ಚಾಮರಾಜನಗರ: ವಾಹನಗಳ ಓಡಾಟದ ನಡುವೆಯೂ ಎರಡು ಗೂಳಿಗಳು ಗುದ್ದಾಡಿ ಕಾಳಗ ನಡೆಸಿರುವ ಘಟನೆ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಸಮೀಪ ನಡೆದಿದೆ.

ಎರಡು ಭಾರಿ ಗಾತ್ರದ ಗೂಳಿಗಳು ಹೆದ್ದಾರಿ ಪಕ್ಕದಲ್ಲಿಯೇ ಕಾದಾಟಕ್ಕೆ ಇಳಿದಿದ್ದವು. ಸ್ಥಳೀಯ ಹೋಟೆಲ್​ನವರು, ಮಳಿಗೆಗಾರರ ಕೂಗಾಟ, ಅರುಚಾಟಕ್ಕೂ ಜಗ್ಗದೇ ನಿಲ್ಲಿಸಿದ್ದ ಬೈಕ್​​ನ್ನು ಬೀಳಿಸಿ, ತುಳಿದು ಫೈಟ್ ಮಾಡಿವೆ.

ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಳಿಗಳ ಗುದ್ದಾಟ

ಇದನ್ನೂ ಓದಿ: ಅಪರೂಪದ ಪಕ್ಷಿಪ್ರೇಮ: ಮೃತ ಗುಬ್ಬಚ್ಚಿ ತಿಥಿ ಮಾಡಿ, ಶ್ರದ್ಧಾಂಜಲಿ

ಬೈಕ್ ಬೀಳುತ್ತಿದ್ದಂತೆ ಎಚ್ಚೆತ್ತ ಯುವಕನೋರ್ವ ಅಲ್ಲೇ ಇದ್ದ ಕೋಲನ್ನು ಬೀಸಿದ್ದಾನೆ. ಇದರಿಂದ ಬೆದರಿದ ಗೂಳಿಗಳು ರಸ್ತೆ ಮಧ್ಯಕ್ಕೆ ಓಡಿ ತಮಿಳುನಾಡಿನಿಂದ ಬರುತ್ತಿದ್ದ ಕಾರಿನ ಮೇಲೆ ನೆಗೆದು ಕಾರಿನ ಗಾಜನ್ನು ಒಡೆದು ಹಾಕಿದೆ. ಈ ಘಟನೆ ಕಳೆದ ಎರಡು ದಿನಗಳ ಹಿಂದೆ ನಡೆದಿದೆ ಎಂದು ಈಟಿವಿ ಭಾರತಕ್ಕೆ ಕಲ್ಯಾಣ್ ಎಂಬವರು ಮಾಹಿತಿ ಹಾಗೂ ವಿಡಿಯೋ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.