ETV Bharat / state

ಬುದ್ಧ, ಬಸವ, ಅಂಬೇಡ್ಕರ್​ ತತ್ವದ ಆಧಾರದ ಮೇಲೆ ಬಿಎಸ್​ಪಿ ಪಕ್ಷ ಹುಟ್ಟಿದೆ: ಶಾಸಕ ಮಹೇಶ್​​ - undefined

ಬಿಜೆಪಿ ಹಾಗೂ ಕಾಂಗ್ರೆಸ್ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಿದ್ದ ಹಾಗೆ. ಎರಡೂ ಒಂದೇ ರೀತಿಯವು. ಆದರೆ ಬುದ್ಧ, ಬಸವ, ಅಂಬೇಡ್ಕರ್ ತತ್ವದ ಆಧಾರದ ಮೇಲೆ ಬಿಎಸ್​ಪಿ ಹುಟ್ಟಿರುವುದು.ಈ ಭಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಂಖ್ಯೆಗಿಂತ ಹೆಚ್ಚು 5 ಸ್ಥಾನ ಬಿಎಸ್​ಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಮಹೇಶ್​​
author img

By

Published : Mar 18, 2019, 10:08 AM IST

ಚಾಮರಾಜನಗರ : ಬಿಜೆಪಿ ಹಾಗೂ ಕಾಂಗ್ರೆಸ್ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಿದ್ದ ಹಾಗೆ. ಎರಡೂ ಒಂದೇ ರೀತಿಯವು. ಆದರೆ ಬುದ್ಧ, ಬಸವ, ಅಂಬೇಡ್ಕರ್ ತತ್ವದ ಆಧಾರದ ಮೇಲೆ ಬಿಎಸ್​ಪಿ ಹುಟ್ಟಿರುವುದು ಎಂದು ಶಾಸಕ ಮಹೇಶ್​ ಹೇಳಿದ್ದಾರೆ.

ನಗರದ ತಾಲೂಕು ಕಚೇರಿ ಮೈದಾನದಲ್ಲಿ ನಡೆದ ಬಿಎಸ್​ಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳ ರೀತಿ ಎರಡೂ ಒಂದೇ ರೀತಿಯವು. ಆದರೆ ಬುದ್ಧ, ಬಸವ, ಅಂಬೇಡ್ಕರ್ ತತ್ವದ ಆಧಾರದ ಮೇಲೆ ಬಿಎಸ್​ಪಿ ಹುಟ್ಟಿರುವುದು ಎಂದರು.

ನಾವು ಮೋದಿಯವರನ್ನು ಸಂಸದೀಯ ಮಾತುಗಳಿಂದಲೇ ಪ್ರಶ್ನಿಸುತ್ತೇವೆ. 10 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ್ದರು. ಉದ್ಯೋಗವೆಲ್ಲಿ ನೀಡಿದ್ದಾರೆ. ಕಪ್ಪು ಹಣ ತರುವುದಾಗಿ ಹೇಳಿದ್ದರು. ಕಪ್ಪು ಹಣ ಎಲ್ಲಿ ತಂದಿದ್ದಾರೆ. ಇದಕ್ಕೆಲ್ಲಾ ಪ್ರಧಾನಿ ಉತ್ತರದಾಯಿಗಳು. ಅಂಬಾನಿ-ಅದಾನಿಯನ್ನು ಸೇಫ್ ಮಾಡಲು ನೋಟ್ ಬ್ಯಾನ್ ಮಾಡಿದರು ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಒಳ ಒಪ್ಪಂದವಿಲ್ಲ:
ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ಅವರೊಂದಿಗೆ ಬಿಎಸ್​ಪಿ ಒಪ್ಪಂದ ಮಾಡಿಕೊಂಡಿದೆ ಎಂಬುದನ್ನು ನಂಬಬೇಡಿ. ಬಹುಜನ ಚಳವಳಿಗೆ ಮೋಸ ಮಾಡುವುದು ಒಂದೇ, ತಾಯಿಗೆ ಮೋಸ ಮಾಡುವುದು ಒಂದೇ ಎಂದು ಒಳ ಒಪ್ಪಂದದ ಮಾತಿಗೆ ಸ್ಪಷ್ಟನೆ ನೀಡಿದರು.

ಅಭ್ಯರ್ಥಿಗಳ ಹುಡುಕಾಟ ನಡೆಯುತ್ತಿದ್ದು, ರಾಜ್ಯ ಸಮಿತಿ ಸೂಚಿಸುವ ಅಭ್ಯರ್ಥಿ ಪರ ಕಾರ್ಯಕರ್ತರು ಕೆಲಸ ಮಾಡಿ ಗೆಲ್ಲಿಸಿಕೊಡಬೇಕು. ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ಎಲ್ಲಾ ಅವಕಾಶಗಳಿವೆ. ಈ ಬಾರಿ ಕಾಂಗ್ರೆಸ್ ಗೆಲ್ಲುವ ಸಂಖ್ಯೆಗಿಂತ ಹೆಚ್ಚು 5 ಸ್ಥಾನ ಬಿಎಸ್​ಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:Body:

Intro:ಬಿಜೆಪಿಯನ್ನು ಹುಟ್ಟಿಸಿದ್ದೇ ಕಾಂಗ್ರೆಸ್: ಶಾಸಕ ಮಹೇಶ್ 

ಚಾಮರಾಜನಗರ: ಬಿಜೆಪಿ ಸಮಯ ಇತರೆ ರಾಜಕೀಯ ಪಕ್ಷಗಳ ಮೂಲವೇ ಕಾಂಗ್ರೆಸ್. ಬಿಜೆಪಿಯನ್ನು ಹುಟ್ಟಿಸಿದ್ದೇ ಕಾಂಗ್ರೆಸ್ ಎಂದು ಶಾಸಕ ಮಹೇಶ್ ಹೇಳಿದರು.

Body:ನಗರದ ತಾಲೂಕು ಕಚೇರಿ ಸಮೀಪದ ಮೈದಾನದಲ್ಲಿ ಕಾನ್ಷಿರಾಂ ಜನ್ಮದಿನ ಪ್ರಯುಕ್ತ ಏರ್ಪಡಿಸಿದ್ದ ಬಿಎಸ್ ಪಿ ಸಮಾವೇಶದಲ್ಲಿ ಅವರು ಮಾತನಾಡಿ, ಬಿಜೆಪಿ ಹಾಗೂ ಕಾಂಗ್ರೆಸ್ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳ ರೀತಿ ಎರಡೂ ಒಂದೇ ರೀತಿಯವು. ಆದರೆ, ಬಿಎಸ್ ಪಿ ಹುಟ್ಟಿರುವುದು ಬುದ್ಧ, ಬಸವ, ಅಂಬೇಡ್ಕರ್ ತತ್ವದ ಆಧಾರದ ಮೇಲೆ ಎಂದರು.

ಪ್ರಧಾನಿ ಮೋದಿ ಕಾವಲುಗಾರನಲ್ಲ ಕಳ್ಳ ಎಂದು ಥರ್ಡ್ ಗ್ರೇಡ್ ಮಾತನ್ನು ನಮ್ಮ ಪಕ್ಷ ಬಳಸುವುದಿಲ್ಲ, ಸಂಸತ್ತಿನಲ್ಲಿ ಮಾತನಾಡುವುದು ಬಿಟ್ಟು ಅಪ್ಪಿಕೊಂಡು ಮುತ್ತಿಟ್ಟು ಬರುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ನಾವು ಮೋದಿಯವರನ್ನು ಸಂಸದೀಯ ಮಾತುಗಳಿಂದಲೇ ಪ್ರಶ್ನಿಸುತ್ತೇವಡ ೧೦ ಕೋಟಿ ಉದ್ಯೋಗವೆಲ್ಲಿ, ಕಪ್ಪು ಹಣ ಎಲ್ಲಿ ತಂದಿರೆಂದು ಇದಕ್ಕೆಲ್ಲಾ ಪ್ರಧಾನಿ ಉತ್ತರದಾಯಿಗಳು. ಅಂಬಾನಿ-ಅದಾನಿಯನ್ನು ಸೇಫ್ ಮಾಡಲು ನೋಟ್ ಬ್ಯಾನ್ ಮಾಡಿದಿರಿ ಎಂದು ಪ್ರಧಾನಿ ವಿರುದ್ಧ ವಾಕ್ ಪ್ರಹಾರ ನಡೆಸಿದರು.

ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್ ನಿಂದಾಗಲಿ, ಬಿಜೆಪಿಯಿಂದಾಗಲಿ, ಸಿದ್ದರಾಮಯ್ಯ ಅವರಿಂದಾಗಲಿ ಸಾಧ್ಯವಿಲ್ಲ ಬಿಎಸ್ ಪಿಯಿಂದ ಮಾತ್ರ ಪ್ರಜಾಪ್ರಭುತ್ವದ ಉಳಿವು, ಮಾಯಾವತಿ ಪ್ರಧಾನಿಯಾದರೇ ಮಾತ್ರ ಪ್ರಜಾಪ್ರಭುತ್ವದ ಉಳಿವು ಎಂದು ಅವರು ಪ್ರತಿಪಾದಿಸಿದರು.

ಕಿಸಾನ್ ಸಮ್ಮಾನ್ ಎಂದು ಮೋದಿ ಅವರು ಪ್ರಾರಂಭಿಸಿರುವ ಅವತಾರವನ್ನು ಹೇಳಿಕೊಟ್ಟಿದ್ದು ಕಾಂಗ್ರೆಸ್. ಜೀವನಪರ್ಯಂತ ಮತ ಪಡೆಯಲು ಇಂದಿರಾ ಗಾಂಧಿ ಟೋಪಿ ಪಿಂಚಣಿ ತಂದರು. ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ವಿವಿಧ ನಿಗಮ ಮಂಡಳಿಗಳ ಲೋನ್ ನೀಡಿ ಒಂದು ಮನೆಗೆ ೧೫-೩೦ ಸಾವಿರ ರೂ.  ಕೊಟ್ಟು ಕಾಂಗ್ರೆಸ್ ಜಯಿಸಿತು ಎಂದು ಆರೋಪಿಸಿದರು.

ಒಳ ಒಪ್ಪಂದವಿಲ್ಲ: ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ಅವರೊಂದಿಗೆ  ಬಿಎಸ್ ಪಿ ಒಪ್ಪಂದ ಮಾಡಿಕೊಂಡಿದೆ ಎಂಬುದನ್ನು ನಂಬಬೇಡಿ. ಬಹುಜನ ಚಳವಳಿಗೆ ಮೋಸ ಮಾಡುವುದು ಒಂದೇ ತಾಯಿಗೆ ಮೋಸ ಮಾಡುವುದೇ ಒಂದೇ ಎಂದು ಒಳ ಒಪ್ಪಂದದ ಮಾತಿಗೆ ಸ್ಪಷ್ಟನೆ ನೀಡಿದರು.

ಅಭ್ಯರ್ಥಿಗಳ ಹುಡುಕಾಟ ನಡೆಯುತ್ತಿದ್ದು ರಾಜ್ಯಸಮಿತಿ ಸೂಚಿಸುವ ಅಭ್ಯರ್ಥಿ ಪರ ಕಾರ್ಯಕರ್ತರು ಕೆಲಸ ಮಾಡಿ ಗೆಲ್ಲಿಸಿಕೊಡಬೇಕು. ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ಎಲ್ಲಾ ಅವಕಾಶಗಳಿವೆ. ಈ ಬಾರಿ ಕಾಂಗ್ರೆಸ್ ಗೆಲ್ಲುವ ಸಂಖ್ಯೆಗಿಂತ ಹೆಚ್ಚು ೫ ಸ್ಥಾನ ಬಿಎಸ್ ಪಿ ಗೆಲ್ಲಲಿದೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

.

Conclusion:ಬಿಎಸ್ ಪಿ ರಾಜ್ಯಾಧ್ಯಕ್ಷ ಹರಿರಾಂ ಸೇರಿದಂತೆ ಇನ್ನಿತರರು ಇದ್ದರು‌

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.