ಚಾಮರಾಜನಗರ: ಈವರೆಗೆ ನನ್ನ ಹೈಕಮಾಂಡ್ನಿಂದ ಯಾವುದೇ ಆದೇಶ ಬಂದಿಲ್ಲ. ಹಾಗಾಗಿ ನಾನು ಸದನಕ್ಕೆ ಹೋಗಿಲ್ಲ ಎಂದು ಬಿಎಸ್ಪಿ ಶಾಸಕ ಎನ್ ಮಹೇಶ್ ಹೇಳಿದ್ದಾರೆ.
ಶಕ್ತಿ ಸೌಧದಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿದ್ದು ನಗರದಲ್ಲಿ ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಹೈಕಮಾಂಡ್, ಈವರೆಗೂ ನನಗೆ ಯಾವುದೇ ಆದೇಶ ನೀಡದ ಕಾರಣ ನಾನು ಸದನಕ್ಕೆ ಹೋಗಿಲ್ಲ. ನಮ್ಮ ಹೈಕಮಾಂಡ್ಅನ್ನು ಈವರೆಗೂ ಜೆಡಿಎಸ್ ನಾಯಕರಾಗಲಿ, ಕಾಂಗ್ರೆಸ್ ನಾಯಕರಾಗಲಿ ಯಾರೂ ಸಹ ಭೇಟಿಯೇ ಮಾಡಿಲ್ಲ. ದೂರವಾಣಿ ಸಂಪರ್ಕ ಸಹ ಮಾಡಿಲ್ಲ. ಹಾಗಾಗಿ ನಾನು ಬೆಂಗಳೂರಿನ ನಮ್ಮ ಮನೆಯಲ್ಲೇ ಇದ್ದೇನೆ ಎಂದಿದ್ದಾರೆ.