ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸ್ಥಾನ ಇದೇ ಮೊದಲ ಬಾರಿಗೆ ಬಿಜೆಪಿಗೆ ಒಲಿದಿದ್ದು, ನೂತನ ಆಧ್ಯಕ್ಷರಾಗಿ ವೈ.ಸಿ ನಾಗೇಂದ್ರ ಆಯ್ಕೆಯಾಗಿದ್ದಾರೆ.
ಚಾಮರಾಜನಗರ ತಾಲೂಕಿನ ಕುದೇರಿನಲ್ಲಿರುವ ಚಾಮುಲ್ ಸಭಾಂಗಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೈ ಅಭ್ಯರ್ಥಿ ಶಾಸಕ ಪುಟ್ಟರಂಗಶೆಟ್ಟಿ ಪುತ್ರಿ ಶೀಲಾ ಪುಟ್ಟರಂಗಶೆಟ್ಟಿ ವಿರುದ್ಧ ಒಂದು ಮತದ ಅಂತರದಲ್ಲಿ ವೈ.ಸಿ ನಾಗೇಂದ್ರ ಅವರು ಗೆದ್ದು ಬೀಗಿದ್ದಾರೆ. ಬಿಜೆಪಿ ಆಂತರಿಕ ಒಪ್ಪಂದದಂತೆ ಮೊದಲ ಎರಡೂವರೆ ವರ್ಷ ನಾಗೇಂದ್ರ ಅಧ್ಯಕ್ಷರಾಗಿರಲಿದ್ದು, ಇನ್ನುಳಿದ ಎರಡೂವರೆ ವರ್ಷ ಹೆಚ್.ಎಸ್ ಬಸವರಾಜು ಅವರು ಅಧ್ಯಕ್ಷರಾಗಲಿದ್ದಾರೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ಗಿಂತ ಬಿಜೆಪಿ ಕಡಿಮೆ ಸ್ಥಾನ ಗೆದ್ದಿದ್ದರೂ ಬಿಜೆಪಿಗೆ ಪಕ್ಷೇತರ, ಜೆಡಿಎಸ್ ಅಭ್ಯರ್ಥಿ, ನಾಮ ನಿರ್ದೇಶನ ಸದಸ್ಯ ಮತ ಹಾಕಿದ್ದರಿಂದ ಗೆಲುವು ದೊರಕಿದೆ.
ಇದನ್ನೂ ಓದಿ: ಟೋಯಿಂಗ್ಗೆ ಬ್ರೇಕ್, ದಾಖಲೆಗೋಸ್ಕರ ವಾಹನ ತಡೆಯುವಂತಿಲ್ಲ.. ನಿಯಮ ಮೀರಿದ್ರೆ ಕ್ರಮ ತಪ್ಪಲ್ಲ