ETV Bharat / state

ಚಾಮರಾಜನಗರದಲ್ಲಿ ಕಮಲ ಅರಳಿಸಲು ಪಣ: ಕಾರ್ಯಕರ್ತರ ಸಭೆ ನಡೆಸಲಿದ್ದಾರೆ ಬಿ.ಎಲ್.ಸಂತೋಷ್ - ಚಾಮರಾಜನಗರದಲ್ಲಿ ಕಮಲ ಅರಳಿಸಲು ಪಣ

ಚಾಮರಾಜನಗರದಲ್ಲಿ ಬಿಜೆಪಿ ಶಕ್ತಿ ಕಳೆದುಕೊಳ್ಳುತ್ತಿದೆ ಎಂಬ ಭೀತಿಯ ಹಿನ್ನೆಲೆಯಲ್ಲಿ ನಾಳೆ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಮುಖ್ಯ ಅತಿಥಿಯಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಆಗಮಿಸಲಿದ್ದು, 2023ರ ಚುನಾವಣೆಗೆ ರಾಜಕೀಯ ಚುರುಕು ಪಡೆದುಕೊಳ್ಳುವ ಲಕ್ಷಣಗಳು ಕಂಡುಬರುತ್ತಿದೆ.

The chief guest BL Santosh
ಬಿ.ಎಲ್.ಸಂತೋಷ್
author img

By

Published : Apr 29, 2022, 8:04 PM IST

ಚಾಮರಾಜನಗರ: ನಾಯಕತ್ವ ಬಿಗಿ ಇಲ್ಲದಿರುವುದು, ಸಂಘಟನೆ ಕೊರತೆ, ಕಾರ್ಯಕರ್ತರ ಕಡೆಗಣನೆ.. ಹೀಗೆ ಸಾಲುಸಾಲು ದೌರ್ಬಲ್ಯಗಳಿಂದ ಬಿಜೆಪಿ ಚಾಮರಾಜನಗರದಲ್ಲಿ ಶಕ್ತಿ ಕಳೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದು ಮುಖ್ಯ ಅತಿಥಿಯಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಆಗಮಿಸುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಶತಾಯಗತಾಯ ಅರ್ಧದಷ್ಟು ಸ್ಥಾನ ಬುಟ್ಟಿಯಲ್ಲಿರಬೇಕೆಂದು ಬಿಜೆಪಿ ಪಣ ತೊಟ್ಟಿರುವ ಬೆನ್ನಲ್ಲೇ ಸಂತೋಷ್ ಭೇಟಿ ಕುತೂಹಲ ಕೆರಳಿಸಿದೆ.

ಬಿಜೆಪಿ ಶಾಸಕ ಎನ್‌.ಮಹೇಶ್ ಅವರ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರವೂ ಒಳಗೊಂಡಂತೆ ನಡೆದ ಎಪಿಎಂಸಿ ಚುನಾವಣೆ 4 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿರುವುದು ಒಂದನ್ನು ಮಾತ್ರ. ಗುಂಡ್ಲುಪೇಟೆ ಎಪಿಎಂಸಿಯಲ್ಲಿ ಮೊದಲ ಬಾರಿ ಕಮಲ ಅರಳಿದೆಯಾದರೂ ಪ್ರಯಾಸದ ಗೆಲುವಾಗಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಚಕ್ರ ಕಟ್ಟಿಕೊಂಡು ಸುತ್ತಾಡಿದರೂ ರಘು ಕೌಟಿಲ್ಯ ಸೋಲಾಗಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ನಾಳಿನ ಬಿ.ಎಲ್.ಸಂತೋಷ್ ಭೇಟಿ ಮಹತ್ವ ಪಡೆದುಕೊಂಡಿದೆ.

ಚಾಮರಾಜನಗರ ಜಿಲ್ಲೆಯಲ್ಲಿ 4 ಎಂಎಲ್​ಗೆ ಸ್ಥಾನಗಳಲ್ಲಿ ಗುಂಡ್ಲುಪೇಟೆಯಲ್ಲಿ ಮಾತ್ರ ಬಿಜೆಪಿ ಗೆದ್ದಿತ್ತು‌. ಬಳಿಕ ನಡೆದ ರಾಜಕೀಯ ಸ್ಥಿತ್ಯಂತರದಲ್ಲಿ ಬಿಎಸ್ಪಿಯಿಂದ ಗೆದ್ದಿದ್ದ ಎನ್.ಮಹೇಶ್ ಬಿಜೆಪಿ ಸೇರಿಕೊಳ್ಳುವ ಮೂಲಕ ನಾಲ್ವರಲ್ಲಿ ಇಬ್ಬರು ಬಿಜೆಪಿ ಎಂಎಲ್ಎ ಇದ್ದಾರೆ. ಆದರೂ, ತೃಪ್ತಿಕರ ಸ್ಥಿತಿಯಲ್ಲಿ ಕಮಲ‌ ಪಾಳೆಯ ಇಲ್ಲದಿರುವುದರಿಂದ ಸಂತೋಷ್ ಎಂಟ್ರಿ ಸಲಹೆ-ಸೂಚನೆ ಕೊಡಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹಾವೇರಿಯಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ; ನಾಲ್ವರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.