ಚಾಮರಾಜನಗರ: ಅರಣ್ಯ ಪ್ರದೇಶದಲ್ಲಿ ಚಿರತೆ, ಹುಲಿಗಳನ್ನು ನೋಡಿದಷ್ಟೇ ರೋಮಾಂಚಕ ಅನುಭವ ಹಾರುವ ಪಕ್ಷಗಳನ್ನು ಕಂಡಾಗ, ಅವುಗಳ ಚಿಲಿಪಿಲಿ ಕೇಳಿಸಿಕೊಂಡಾಗ ಆಗಲಿದೆ. ಈ ರೀತಿಯ ಅವಿಸ್ಮರಣೀಯ ಸಮಯಕ್ಕೆ ನೀವು ಬಿಳಿಗಿರಿರಂಗನ ಬೆಟ್ಟಕ್ಕೆ ಬರಲೇಬೇಕು.
ಹೌದು, ಎರಡು ಹುಲಿ ಸಂರಕ್ಷಿತ ಪ್ರದೇಶ ಹೊಂದುವ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಚಾಮರಾಜನಗರ ಜಿಲ್ಲೆಯಲ್ಲಿ 2021ರ ಜ. 5ರಿಂದ 7ರವರಗೆ ಹಕ್ಕಿ ಹಬ್ಬ ನಡೆಯಲಿದ್ದು, ಜಿಲ್ಲೆಯಲ್ಲಿ ಮೊದಲ ಹಾಗೂ ರಾಜ್ಯದಲ್ಲಿ 7ನೇ ಸ್ಥಳವಾಗಿ ಈ ಹಬ್ಬ ನಡೆಯಲಿದೆ ಎಂದು ಈಟಿವಿ ಭಾರತಕ್ಕೆ ಸಿಸಿಎಫ್ ಮನೋಜ್ ಕುಮಾರ್ ತಿಳಿಸಿದ್ದಾರೆ.
ರಂಗನತಿಟ್ಟು, ದಾಂಡೇಲಿ, ಬಳ್ಳಾರಿ, ಮಂಗಳೂರು, ಚಿಕ್ಕಬಳ್ಳಾಪುರ ಮತ್ತು ಕಾರವಾರದಲ್ಲಿ ಈಗಾಗಲೇ ಯಶಸ್ವಿಯಾಗಿರುವ ಈ ಹಬ್ಬವನ್ನು ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ. ಪೂರ್ವ ಮತ್ತು ಪಶ್ಚಿಮಘಟ್ಟಗಳನ್ನು ಬೆಸೆಯುವ, ವಿವಿಧ ಮಾದರಿಯ ಅರಣ್ಯ ಹೊಂದಿರುವ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ( ಬಿಆರ್‌ಟಿ) ಹುಲಿಸಂರಕ್ಷಿತ ಪ್ರದೇಶದಲ್ಲಿ ಅಪರೂಪದ ಹಕ್ಕಿಗಳ ವೀಕ್ಷಣೆ ಹಾಗೂ ಛಾಯಾಗ್ರಹಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ಅಳಿವಿನಂಚಿನಲ್ಲಿರುವ ಹಕ್ಕಿಗಳ ಸಂತತಿ ಸಂರಕ್ಷಣೆ ಹಾಗೂ ಅಧ್ಯಯನ ನಿಟ್ಟಿನಲ್ಲಿ ಜ. 5ರಿಂದ 7ರವರೆಗೆ ‘ಹಕ್ಕಿ ಹಬ್ಬ’ ನಡೆಯಲಿದೆ. ಹಕ್ಕಿಗಳ ಕುರಿತು ಆಸಕ್ತರಿಗೆ ಹಾಗೂ ಅಧ್ಯಯನಶೀಲರಿಗೆ ಇದೊಂದು ಪ್ರಮುಖ ಅವಕಾಶವಾಗಿದೆ.
ನೋಡಿ...ಗುಡ್ಡದ ಮೇಲೆ ನಿಂತು ನೋಟ ಜೊತೆಗೆ ಊಟ.. ಗಜರಾಜನ ವಿಡಿಯೋ ವೈರಲ್