ಚಾಮರಾಜನಗರ: ಕಾಡುಗಳ್ಳರ ಸಿಂಹಸ್ವಪ್ನ, ಪತ್ತೇದಾರಿಯಲ್ಲಿ ನಂ.1 ಆಗಿದ್ದ ರಾಣಾ ಶ್ವಾನ ಸೋಮವಾರ ರಾತ್ರಿ ವಯೋಸಹಜದಿಂದ ಅಸುನೀಗಿದೆ. ರಾಣಾನಿಗೆ 10 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ. ಹುಲಿ ಕೊಂದವರು, ಮರ ಕಡಿದವರು, ಹುಲಿ ಸೆರೆ ಕಾರ್ಯಾಚರಣೆಯಲ್ಲೂ ರಾಣಾ ಪರಾಕ್ರಮ ತೋರಿದ್ದ. ತನ್ನ ಸಾಹಸಗಳಿಂದಲೇ ರಾಣಾ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದ.
ಬಂಡೀಪುರ ಸಫಾರಿ ಕೌಂಟರ್ ಸಮೀಪ ರಾಣಾ ಪಾರ್ಥಿವ ಶರೀರ ಇರಿಸಲಾಗಿದ್ದು, ಗೌರವ ಸಮರ್ಪಣೆ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿಗಾಗಿ ವಲಯ ಅರಣ್ಯಾಧಿಕಾರಿ ನವೀನ್ ಸಂಪರ್ಕಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ.
ರಾಣಾ ಜರ್ಮನ್ ಶೆಫರ್ಡ್ ಜಾತಿಯ ಶ್ವಾನವಾಗಿದ್ದು, ಮಧ್ಯಪ್ರದೇಶದಲ್ಲಿ 2 ವರ್ಷ ತರಬೇತಿ ಪಡೆದಿರುವ ಸಖತ್ ಶಾರ್ಪ್ ಆಗಿದೆ. ಪ್ರಕಾಶ್ ಎಂಬವರು ಈ ರಾಣಾನನ್ನು ನೋಡಿಕೊಳ್ಳುತ್ತಿದ್ದರು. ಬಳಿಕ ಕಾಳ, ನಾಗೇಂದ್ರ ಎಂಬುವರು ಶ್ವಾನದ ಮೆಂಟರ್ ಆಗಿದ್ದರು. ಇವರನ್ನು ಬಿಟ್ಟು ಬೇರಿನ್ಯಾರ ಮಾತನ್ನು ರಾಣಾ ಕೇಳ್ತಿರಲಿಲ್ಲ ಮತ್ತು ಬೇರೆಯವರು ನೀಡಿದ ತಿನಿಸನ್ನು ಸಹ ತಿನ್ನುತ್ತಿರಲಿಲ್ಲ.
(ಇದನ್ನೂ ಓದಿ: ನಿವೃತ್ತಿ ಅನ್ನುವಾಗಲೇ ಫಿಟ್ ಆ್ಯಂಡ್ ಫೈನ್ ಎಂದ ಬಂಡೀಪುರದ 'ರಾಣಾ': 2 ವರ್ಷ ಈ ಹಂಟರ್ನ ಸೇವೆ ಅಬಾಧಿತ)