ETV Bharat / state

ಚಾಮರಾಜನಗರದಲ್ಲೂ ಇದಾನೆ ಬಘೀರಾ: ಮೊದಲ ಬಾರಿಗೆ ಬಿಆರ್​​ಟಿಯಲ್ಲಿ ಕರಿಚಿರತೆ ಪತ್ತೆ - ಬಿಆರ್​​ಟಿಯಲ್ಲಿ ಕರಿಚಿರತೆ ಪತ್ತೆ

ಕಬಿನಿ ಹಿನ್ನೀರಿನಲ್ಲಿ ಈ ಹಿಂದೆ ಕರಿಚಿರತೆ ಚಿತ್ರವೊಂದು ವನ್ಯಜೀವಿ ಛಾಯಾಗ್ರಾಹಕನ ಕ್ಯಾಮರಾ ಕಣ್ಣಿಗೆ ಸೆರೆಯಾಗಿ ಎಲ್ಲರ ಗಮನ ಸೆಳೆದಿದೆ. ಇದೀಗ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿಯೂ ಕರಿಚಿರತೆಯೊಂದು ಪತ್ತೆಯಾಗಿದೆ.

Black Panter
ಕರಿಚಿರತೆ
author img

By

Published : Aug 6, 2020, 3:08 PM IST

ಚಾಮರಾಜನಗರ: ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಕರಿಚಿರತೆಯೊಂದು ಪತ್ತೆಯಾಗಿದೆ.

ಬಿ.ಆರ್.ಟಿ ಡಿಎಫ್ಒ ಸಂತೋಷ್ ಕುಮಾರ್

ಬೈಲೂರು ಅರಣ್ಯ ವಲಯದ ಕೆ. ಡ್ಯಾಂ ಸಮೀಪದಲ್ಲಿ ಕರಿಚಿರತೆ ನಡೆದು ಹೋಗುತ್ತಿರುವ ಚಿತ್ರ ಹುಲಿ ಗಣತಿಗಾಗಿ ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಲೆಮಹದೇಶ್ವರ ವನ್ಯಜೀವಿ ಧಾಮದಿಂದ ಈ ಕರಿ ಚಿರತೆ ಬಂದಿದೆಯಾ ಅಥವಾ ಬೇರೆ ಇನ್ನೆಲ್ಲಾದರೂ ಕರಿಚಿರತೆ ಇರುವ ಸಾಧ್ಯತೆ ಇದೆಯೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಬಿ.ಆರ್.​​ಟಿ ಡಿಎಫ್ಒ ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಅಂದಾಜು 4 ವರ್ಷದ ಕರಿಚಿರತೆ ಇದಾಗಿದ್ದು, ಚಾಮರಾಜನಗರದಲ್ಲೂ ಬಘೀರಾ ಇರುವುದು ಈ ಮೂಲಕ ಖಾತ್ರಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.