ಚಾಮರಾಜನಗರ: ಇಬ್ಬರು ಗಾಂಜಾ ಮಾರಾಟಗಾರರನ್ನು ಪ್ರತ್ಯೇಕವಾಗಿ ಬಂಧಿಸಿರುವ ಘಟನೆ ಹನೂರು ತಾಲೂಕಿನ ಜಲ್ಲಿಪಾಳ್ಯದಲ್ಲಿ ನಡೆದಿದೆ.
ಜಲ್ಲಿಪಾಳ್ಯ ಗ್ರಾಮದ ವೀರಪ್ಪನ್ (74) ಹಾಗೂ ಶೇಷುರಾಜು (52) ಬಂಧಿತರು. ಗಾಂಜಾ ಮಾರಾಟದ ಬಗ್ಗೆ ಖಚಿತ ಮಾಹಿತಿ ಪಡೆದ ರಾಮಾಪುರ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಮಾಲು ಸಮೇತ ಬಂಧಿಸಿದ್ದಾರೆ.
ಬಂಧಿತರಿಂದ ಅಂದಾಜು 2.16 ಲಕ್ಷ ರೂ. ಮೌಲ್ಯದ 2.6 ಕೆಜಿ ಒಣಗಿದ ಗಾಂಜಾ ವಶಪಡಿಸಿಕೊಂಡು ರಾಮಾಪುರ ಠಾಣೆ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.