ಚಾಮರಾಜನಗರ: ವಿದ್ಯಾರ್ಥಿನಿಯನ್ನು ಎಳೆದಾಡಿ, ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ಚಾಮರಾಜನಗರ ಮೆಡಿಕಲ್ ಕಾಲೇಜಿನ ನೇತ್ರ ತಜ್ಞನನ್ನು ಸಿಮ್ಸ್ ಡೀನ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸಿಮ್ಸ್ ನೇತ್ರ ವಿಭಾಗದ ಮುಖ್ಯಸ್ಥ ಡಾ.ಮಹೇಶ್ವರನ್ ಅಮಾನತುಗೊಂಡ ವೈದ್ಯ. ಎರಡು ದಿನಗಳ ಹಿಂದೆ ಅಲ್ಪಾವದಿಯ ನರ್ಸಿಂಗ್ ತರಬೇತಿಗಾಗಿ ಸೇರಿದ್ದ ವಿದ್ಯಾರ್ಥಿನಿ ಒಬ್ಬರನ್ನೂ ಮಹೇಶ್ವರನ್ ಎಳೆದಾಡಿ, ಲೈಂಗಿಕ ಕಿರುಕುಳ ನೀಡಿ, ಅಸಹ್ಯವಾಗಿ ವರ್ತಿಸಿದ್ದಾರೆಂದು ಜಿಲ್ಲಾ ಸರ್ಜನ್ಗೆ ಯುವತಿ ದೂರು ಕೊಟ್ಟಿದ್ದಳು.
ಕಳೆದ ಒಂದು ವಾರದಿಂದ ದೂರಿನ ಬಗ್ಗೆ ಆಂತರಿಕ ತನಿಖಾ ಸಮಿತಿಯು ವಿಚಾರಣೆ ನಡೆಸುತ್ತಿದ್ದು ಸದ್ಯ ವೈದ್ಯನನ್ನು ಅಮಾನತು ಮಾಡಲಾಗಿದೆ ಎಂದು ಡೀನ್ ಮಾಹಿತಿ ಕೊಟ್ಟಿದ್ದಾರೆ.
ಎನ್ಜಿಒ ಮೂಲಕ ನರ್ಸಿಂಗ್ ತರಬೇತಿಗೆ ಸೇರಿದ್ದ ಯುವತಿಯನ್ನು ವೈದ್ಯ ಎಳೆದಾಡಿದ ಸಂದರ್ಭದಲ್ಲಿ ಯುವತಿ ಚೀರಿಕೊಂಡಾಗ, ನರ್ಸಿಂಗ್ ತರಬೇತಿ ಪಡೆಯುತ್ತಿದ್ದ ಇತರರು ಯುವತಿಯನ್ನು ರಕ್ಷಿಸಿ ಮಹೇಶ್ವರನ್ಗೆ ಗೂಸ ಕೊಟ್ಟಿದ್ದರು.
ಇದನ್ನೂ ಓದಿ:ಚಾಮರಾಜನಗರ : 5 ವರ್ಷದ ಬಾಲಕಿ ಮೇಲೆ ಮಲ ತಂದೆಯಿಂದ ಅತ್ಯಾಚಾರ