ETV Bharat / state

ಹಸಿರು ವನ ಕಡಿದು ಉಸಿರಿಗಾಗಿ‌ ಹೋರಾಟ: ಗಮನ ಸೆಳೆದ 'ಬದಲಾಗು ನೀ ಮೊದಲು' ಆಲ್ಬಂ ಸಾಂಗ್ - Crorona Song

ಕೋವಿಡ್ ಎರಡನೇ ಅಲೆಯ ಪರಿಸ್ಥಿತಿಯನ್ನು ಉದಾಹರಣೆಯಾಗಿ ಇಟ್ಟುಕೊಂಡು ಪರಿಸರ ನಾಶದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಚಾಮರಾಜನಗರದ ಜಿಲ್ಲೆಯ ಚಿತ್ರ ನಿರ್ದೇಶಕರೊಬ್ಬರು ರಚಿಸಿದ ಆಲ್ಬಂ ಹಾಡು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Covid Album Song
ಗಮನಸೆಳೆದ ಆಲ್ಬಂ ಸಾಂಗ್
author img

By

Published : Jun 21, 2021, 10:43 AM IST

ಚಾಮರಾಜನಗರ: ಕೊರೊನಾ ಎರಡನೇ ಅಲೆಯಲ್ಲಿ ಆಮ್ಲಜನಕಕ್ಕಾಗಿ ಜನರು ನಡೆಸಿದ ಪರದಾಟ, ಕೋಟಿಗಟಲೆ ಹಣವಿದ್ದರೂ ಮಹಾಮಾರಿ ಗೆಲ್ಲಲಾಗದ ಕಟುಸತ್ಯದ ಕುರಿತು ತಯಾರಾಗಿರುವ "ಬದಲಾಗು ನೀ ಮೊದಲು" ಎಂಬ ಆಲ್ಬಂ ಸಾಂಗ್ ಜನರ ಗಮನ ಸೆಳೆದಿದೆ.

  • " class="align-text-top noRightClick twitterSection" data="">

ಗುಂಡ್ಲುಪೇಟೆ ತಾಲೂಕಿನ‌ ಬೆಟ್ಟದ ಮಾದಹಳ್ಳಿ ಗ್ರಾಮದ ಬದ್ರಿ ಎಂಬ ಚಿತ್ರ ನಿರ್ದೇಶಕ ಸಾಹಿತ್ಯ ಬರೆದು‌ ತಯಾರಿಸಿರುವ ಈ ಆಲ್ಬಂ ಸಾಂಗ್, ಬದುಕಿನ ವಾಸ್ತವ ಪರಿಸ್ಥಿತಿಯನ್ನು ತೆರೆದಿಡುತ್ತಲೇ ಹಣದ ಹಿಂದೆ ಬಿದ್ದು ಪರಿಸರ ನಾಶ ಮಾಡುತ್ತಿರುವುದನ್ನು ಮನಮುಟ್ಟುವಂತೆ ತೆರೆಗೆ ತಂದಿದೆ.

"ಹಸಿರು ವನವ‌ ಕಡಿದು ಉಸಿರಿಗಾಗಿ ಹೋರಾಟ ಮಾಡುತ್ತೀದ್ದೀರಿ. ಕೆರೆ-ಕಟ್ಟೆ, ಬೆಟ್ಟವನ್ನು ಆಕ್ರಮಿಸಿಕೊಂಡು ಮೆರೆದು ನಾಲ್ಕು ಜನರಿಗೆ ಭಾರವಾದಿರಿ.

ಕೋಟಿಗಟ್ಟಲೆ ಹಣವಿದ್ದರೂ ಕೊರೊನಾ ಜಯಿಸಲಿಲ್ಲ" ಎನ್ನುವ ಮೂಲಕ ಪರಿಸರ ರಕ್ಷಣೆ, ಸಾಮಾಜಿಕ‌ ಬದ್ಧತೆ ರೂಢಿಸಿಕೊಳ್ಳಿ ಎಂದು ನಿರ್ದೇಶಕ ಬದ್ರಿ ಹಾಡಿನ ಮೂಲಕ ಕಿವಿಮಾತು ಮತ್ತು ಎಚ್ಚರಿಕೆ ಕೊಟ್ಟಿದ್ದಾರೆ.

ಚಿಂತನೆಗೆ ಕಿಚ್ಚು ಹಚ್ಚುವ ಬದ್ರಿಯವರ ಸಾಹಿತ್ಯಕ್ಕೆ ಮಹೇಶ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಯೂಟ್ಯೂಬ್ ಚಾನೆಲೊಂದರಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶನಿವಾರ ಆಲ್ಬಂ ಅನ್ನು ಬಿಡುಗಡೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬದ್ರಿ ಬಿ.ಎಂ.ಹಳ್ಳಿ ಅವರು ಬಡತನದಲ್ಲೇ ಅರಳಿದ ಪ್ರತಿಭೆ. ಹೋಟೆಲ್​ನಲ್ಲಿ ನೌಕರಿ ಮಾಡುತ್ತಾ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಸಹ ನಿರ್ದೇಶನ, ಆಲ್ಬಂ ಸಾಂಗ್‌ಗಳನ್ನು ಮಾಡಿದ್ದಾರೆ. ಇದರೊಟ್ಟಿಗೆ ಹಲವು ಚಿತ್ರಗಳಿಗೆ ಗೀತ ರಚನೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಲಾಕ್​ ಡೌನ್​ ಅವಧಿಯಲ್ಲಿ ಇವರು ಜೀವನೋಪಾಯಕ್ಕಾಗಿ ತಂದೆಯೊಟ್ಟಿಗೆ ಕುಲುಮೆ ಕೆಲಸ ಮಾಡುತ್ತಿದ್ದ ಬಗ್ಗೆ ಈಟಿವಿ ಭಾರತ ವರದಿ ಪ್ರಕಟಿಸಿತ್ತು.

ಇದನ್ನೂ ಓದಿ: ಕೊರೊನಾ ಎಫೆಕ್ಟ್: ಕುಲುಮೆಯಲ್ಲಿ ದುಡಿಮೆ ಕಂಡುಕೊಂಡ ಚಿತ್ರ ಸಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.