ಚಾಮರಾಜನಗರ: ಕೃಷಿ ಖಾತೆ ಮುಳ್ಳಿನ ಹಾಸಿಗೆ, ಜೈಕಾರಕ್ಕಿಂತ ಧಿಕ್ಕಾರವೇ ಜಾಸ್ತಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಮ್ಮ ಅನುಭವವನ್ನು ಹೊರಹಾಕಿದರು.
ಗುಂಡ್ಲುಪೇಟೆಯ ಮುಂಟಿಪುರದಲ್ಲಿ ರಾಜಶೇಖರ ಎಂಬುವರ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಿದ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಷ್ಟೇ ಕೆಲಸ ಮಾಡಿದರೂ ಧಿಕ್ಕಾರದ ಕೂಗು ಕೇಳಬೇಕಾಗುತ್ತದೆ. ನಾನು ಪೊಲೀಸ್ ಅಧಿಕಾರಿ ಆಗಿದ್ದಾಗಲೂ ಧಿಕ್ಕಾರದ ಮಾತು ಕೇಳಿದ್ದೇನೆ. ಒಬ್ಬರ ವಿರುದ್ಧ ಧಿಕ್ಕಾರ ಕೂಗುತ್ತಾರೆ ಅಂದ್ರೆ ಅವರು ಬೆಳೆಯುತ್ತಿದ್ದಾರಂತಲ್ಲವೇ ಎಂದು ಸಭಿಕರನ್ನೇ ಪ್ರಶ್ನಿಸಿದರು.
ಓದಿ-ತೃತೀಯ ಲಿಂಗಿಗಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಗೃಹ ಸಚಿವಾಲಯ ನಿರ್ದೇಶನ
ನಾನು 40 ಸಿನಿಮಾ ಮಾಡಿದ್ದೀನಿ
ರೈತರ ಬಳಿ ಹೋಗಿ ಫೋಟೋಗೆ ಪೋಸ್ ಕೊಡ್ತಾರೆ, ಇದರಿಂದ ರೈತರ ಸಮಸ್ಯೆ ಬಗೆಹರಿಯುತ್ತಾ ಎಂದು ಕೆಲವರು ಟೀಕಿಸುತ್ತಿದ್ದಾರೆ. ನಾನು 40 ಸಿನಿಮಾ ಮಾಡಿದ್ದೀನಿ. ಫೋಟೋಗೆ ಪೋಸ್ ಕೊಡುವ ಅವಶ್ಯಕತೆ ನನಗಿಲ್ಲ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.
ಸಿಎಫ್ಟಿಆರ್ಐನಿಂದ ರೈತರಿಗೆ ತರಬೇತಿ
ಯಾವ ಇಸ್ರೇಲ್ ಮಾದರಿ ಕೃಷಿಯೂ ಬೇಡ. ರೈತರು ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು. ದಲ್ಲಾಳಿಗಳಿಂದ ಆಗುತ್ತಿರುವ ಅನ್ಯಾಯ ತಪ್ಪಿಸಲು ರೈತರೇ ಕ್ರಮ ಕೈಗೊಳ್ಳಬೇಕು. ಬೆಳೆ ಸಂಸ್ಕರಿಸಿಟ್ಟುಕೊಂಡು ಬೆಲೆಯನ್ನೂ ರೈತರೇ ನಿಗದಿ ಮಾಡಬೇಕು. ಈ ದಿಸೆಯಲ್ಲಿ ಮೈಸೂರಿನ ಸಿಎಫ್ಟಿಆರ್ಐನಲ್ಲಿ ವಾರಕ್ಕೆ 50 ಮಂದಿ ರೈತರಿಗೆ ತರಬೇತಿ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಎಲ್ಲಾ ರೈತರಿಗೂ ಎಲ್ಲಾ ಮಾಹಿತಿ ಒಳಗೊಂಡ ಸ್ವಾಭಿಮಾನಿ ಗುರುತಿನ ಚೀಟಿ ವಿತರಿಸಲಾಗುವುದು ಎಂದರು.