ಚಾಮರಾಜನಗರ: ಅವಕಾಶ ಸಿಕ್ಕರೇ ಚೆಲುವ ಚಾಮರಾಜನಗರದ ರಾಯಭಾರಿಯಾಗಲು ಸಿದ್ಧ ಎಂದು ನಟ ರಾಘವೇಂದ್ರ ರಾಜ್ಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ರಾಜಕುಮಾರ್ ಚೆಲುವ ಚಾಮರಾಜನಗರದ ರಾಯಭಾರಿಯಾಗಿದ್ದು, ಅದನ್ನು ತಮ್ಮ ಕುಟುಂಬದ ಯಾರಾದರೂ ಮುಂದುವರಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ "ನಾನು ಪುನೀತ್ ರಾಜ್ಕುಮಾರ್ ಆಗಲು ಸಾಧ್ಯವಿಲ್ಲ. ಆದರೆ ರಾಯಭಾರಿಯಾಗುವ ಅವಕಾಶ ಸಿಕ್ಕರೇ ಖಂಡಿಯಾ ನನ್ನ ತಲೆಗೆ, ಕಣ್ಣಿಗೆ ಒತ್ತುಕೊಂಡು ಮಾಡುತ್ತೇನೆ. ಅಣ್ಣನಾಗಿ ಅದನ್ನು ನೆರವೇರಿಸಿಕೊಂಡು ಹೋಗುತ್ತೇನೆ" ಎಂದರು.
ಚಾಮರಾಜನಗರಕ್ಕೆ ಬರಲು ಅವಕಾಶ ಮಾಡಿಕೊಡುವಂತೆ ಆಗಾಗ ದೇವರಲಿ ಕೇಳಿಕೊಳ್ಳುತ್ತೇನೆ. ನಮ್ಮ ಕುಟುಂಬಕ್ಕೆ ಎರಡು ಕರ್ನಾಟಕ ರತ್ನ ಬರಲು ಅಭಿಮಾನಿಗಳೇ ಕಾರಣ. ಚಾಮರಾಜನಗರಕ್ಕೆ ಬಂದರೆ ಮನೆಗೆ ಬಂದ ಖುಷಿಯಾಗುತ್ತದೆ ಎಂದರು.
ಇನ್ನು ಗಂಧದ ಗುಡಿ ಚಿತ್ರ ಪರಿಸರ ಉಳಿಸಿ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿ ಎಂಬ ಸಂದೇಶ ಕೊಡಲಿದೆ. ಅದನ್ನು ಅಭಿಮಾನಿಗಳು ಪಾಲಿಸಿದರೆ ಪುನೀತ್ಗೆ ಗೌರವ ಸಲ್ಲಿಸಿದಂತಾಗುತ್ತದೆ. ಒಳ್ಳೆಯ ಸಂದೇಶ ಕೊಡಲು ಭೂಮಿಗೆ ಬಂದ ಅದು ಮುಗಿಯಿತು ಹೊರಟು ಹೋದ ಎಂದರು.
ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿರುವ ಪವರ್ ಸ್ಟಾರ್ ಕನಸಿನ ಚಿತ್ರ