ಚಾಮರಾಜನಗರ: ಜಿಲ್ಲೆಗೆ ಕಳಪೆ ಗುಣಮಟ್ಟದ ಬೇಳೆ ಪೂರೈಕೆಯಾಗಿತ್ತು. ಅದನ್ನು ವಾಪಸ್ ಕಳುಹಿಸಿದ್ದು, ಗುಣಮಟ್ಟದ ಬೇಳೆ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿ, ಜಿಲ್ಲೆಗೆ ಕಳಪೆ ಗುಣಮಟ್ಟದ ಬೇಳೆಯನ್ನು ವಿತರಿಸಿದ ಏಜೆನ್ಸಿ ವಿರುದ್ಧ ಕ್ರಮ ಕೈಗೊಂಡು ಬ್ಲಾಕ್ ಲಿಸ್ಟ್ಗೆ ಸೇರಿಸಲಾಗುವುದು ಎಂದು ತಿಳಿಸಿದರು.
ಲಾಕ್ಡೌನ್ ವೇಳೆ ಪಡಿತರ ನೀಡುವಲ್ಲಿ ಗ್ರಾಹಕರಿಗೆ ಮೋಸ, ತೂಕದಲ್ಲಿ ವ್ಯತ್ಯಾಸ ಮಾಡುತ್ತಿದ್ದ ರಾಜ್ಯದ 166 ನ್ಯಾಯಬೆಲೆ ಅಂಗಡಿಗಳನ್ನು ಅಮಾನತಿನಲ್ಲಿರಿಸಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.