ಚಾಮರಾಜನಗರ: ಬೈಕ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.
ಕಮರಹಳ್ಳಿಯ ಮಹೇಶ್ ( 36) ಮೃತ ದುರ್ದೈವಿ. ಕಮರಹಳ್ಳಿಯಿಂದ ಬೇಗೂರಿಗೆ ಬರುತ್ತಿದ್ದ ಬೈಕ್ಗೆ ಆಸೀಫ್ ಎಂಬಾತ ಕಾರು ಡಿಕ್ಕಿ ಹೊಡೆಸಿದ ಪರಿಣಾಮ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಈತ ಮಡಿಕೇರಿಯಿಂದ ಬಂದು ಕೇರಳ ಗಡಿಯಲ್ಲಿ ಪ್ರಯಾಣಿಕ ರೊಬ್ಬರನ್ನ ಕರೆತರಲು ಹೋಗುತ್ತಿರಬೇಕಾದರೆ ಈ ಅವಘಡ ನಡೆದಿದೆ.
ಘಟನೆ ಸಂಬಂಧ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕ ಮಹಮ್ಮದ್ ಆಸೀಫ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.