ಚಾಮರಾಜನಗರ: ಪೌತಿ ಖಾತೆಗೆ ಹೆಸರು ಸೇರಿಸಲು ಲಂಚಕ್ಕೆ ಬೇಡಿಕೆಯಿಟ್ಟು ಹಣ ಪಡೆಯುತ್ತಿದ್ದ ಗ್ರಾಮ ಲೆಕ್ಕಿಗನೊಬ್ಬ ಎಸಿಬಿ ಬಲೆಗೆ ಬಿದ್ದಿರುವ ಘಟನೆ ತಾಲೂಕಿನ ಚಂದಕವಾಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಗ್ರಾಮಲೆಕ್ಕಿಗ ಮಹೇಶ್ ಕುಮಾರ್ ಬಲೆಗೆ ಬಿದ್ದ ಆರೋಪಿ. ಮೂಕನಪಾಳ್ಯ ಗ್ರಾಮದ ವ್ಯಕ್ತಿಯೊಬ್ಬರು ಜಮೀನಿನ ಪೌತಿ ಖಾತೆಯಲ್ಲಿ ತಮ್ಮ ಕುಟುಂಬದವರ ಹೆಸರು ಸೇರಿಸಲು ಒಂದೂವರೆ ತಿಂಗಳಿನ ಹಿಂದೆ ಉಪತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆಗ ಬಿಟ್ಟು ಹೋದವರ ಹೆಸರು ಸೇರಿಸಲು ಮಹೇಶ್ ಕುಮಾರ್ 8 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಓದಿ: ನಾನು ದೇಣಿಗೆ ಕೊಡಲು ಆಗಲ್ಲ ಅಂದಿಲ್ಲ, ಪದೇ ಪದೆ ನನ್ನ ಕೆಣಕಬೇಡಿ : ಹೆಚ್ಡಿಕೆ
ಮುಂಗಡವಾಗಿ 2500 ರೂ. ಪಡೆದಿದ್ದ ಮಹೇಶ್, ಇಂದು 5500 ರೂ. ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಸದ್ಯ, ಆರೋಪಿಯನ್ನು ಬಂಧಿಸಿ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.