ETV Bharat / state

ಹಿಂದೂ ಧರ್ಮ ರಕ್ಷಣೆಗೆ ಮೈಸೂರು ಅರಮನೆ ಸದಾಸಿದ್ಧ: ರಾಜವಂಶಸ್ಥ ಯದುವೀರ್ ಒಡೆಯರ್ - ಚಾಮರಾಜನಗರದಲ್ಲಿ ಎಬಿವಿಪಿ 41ನೇ ರಾಜ್ಯ ಸಮ್ಮೇಳನ

ನಮ್ಮ ಸಮಾಜದಲ್ಲಿನ ಬಹುತೇಕ ಸಮಸ್ಯೆಗಳಿಗೆ ಹಿಂದೂ ಧರ್ಮದಲ್ಲೇ ಉತ್ತರವಿದೆ. ಆದ್ದರಿಂದ,‌ ಧರ್ಮ ರಕ್ಷಣೆ ಅಗತ್ಯವಾಗಿದೆ ಧರ್ಮ ರಕ್ಷಣೆಗೆ ಜಾತಿ - ಜಾತಿಗಳು ಒಗ್ಗಟ್ಟಾಗಬೇಕು - ರಾಜವಂಶಸ್ಥ ಯದುವೀರ್ ಒಡೆಯರ್

abvp 41st congrees
ಎಬಿವಿಪಿ 41ನೇ ರಾಜ್ಯ ಸಮ್ಮೇಳನ
author img

By

Published : Feb 15, 2022, 5:34 PM IST

ಚಾಮರಾಜನಗರ: ಹಿಂದೂ ಧರ್ಮ ರಕ್ಷಣೆಗೆ ಮೈಸೂರು ಅರಮನೆಯು ಹಿಂದೆಯೂ ಸದಾ ಸಿದ್ಧವಾಗಿತ್ತು, ಈಗಲೂ ಧರ್ಮ ರಕ್ಷಣೆಗೆ ನಾವು ಸಿದ್ಧವಾಗಿದ್ದೇವೆ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು.

ಎಬಿವಿಪಿ 41ನೇ ರಾಜ್ಯ ಸಮ್ಮೇಳನ

ಚಾಮರಾಜನಗರದ ನಂದಿ ಭವನದಲ್ಲಿ ಆಯೋಜನೆಗೊಂಡಿರುವ ಎಬಿವಿಪಿ 41ನೇ ರಾಜ್ಯ ಸಮ್ಮೇಳನದಲ್ಲಿ ಅವರು ಮಾತನಾಡಿ, ನಮ್ಮ ಸಮಾಜದಲ್ಲಿನ ಬಹುತೇಕ ಸಮಸ್ಯೆಗಳಿಗೆ ಹಿಂದೂ ಧರ್ಮದಲ್ಲೇ ಉತ್ತರವಿದೆ. ಆದ್ದರಿಂದ,‌ ಧರ್ಮ ರಕ್ಷಣೆ ಅಗತ್ಯವಾಗಿದೆ ಧರ್ಮ ರಕ್ಷಣೆಗೆ ಜಾತಿ - ಜಾತಿಗಳು ಒಗ್ಗಟ್ಟಾಗಬೇಕು ಎಂದು ಹೇಳಿದರು.

ಕಡಿಮೆ ಸಂಖ್ಯೆಯಲ್ಲಿದ್ದ ಬ್ರಿಟಿಷರು ಭಾರತವನ್ನು ಆಳಲು ಸಾಧ್ಯವಾಗಿದ್ದು ನಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣದಿಂದ ಎಂದು ಅಭಿಪ್ರಾಯಪಟ್ಟರು. ಜಯಚಾಮರಾಜ ಒಡೆಯರ್ ವಿಶ್ವಹಿಂದೂ ಪರಿಷತ್​ನ ಅಧ್ಯಕ್ಷರಾಗಿ ಬೇಸಗೆ ಅರಮನೆಯಲ್ಲಿ ನಡೆಸಿದ ಸಮ್ಮೇಳನವನ್ನು ನೆನಪಿಸಿಕೊಂಡರು.

ಧರ್ಮದ ಜೊತೆ ಪರಿಸರ ರಕ್ಷಣೆಗೂ ನಾವು ಆದ್ಯತೆ ಕೊಡಬೇಕು ಶಿಕ್ಷಣದಿಂದ ಸಾಧ್ಯ. ಶಿಕ್ಷಣದಿಂದಲೇ ಈ ಬಗ್ಗೆ ಜಾಗೃತಿ ಮಾಡಿಸುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸಚಿವ ಡಾ.ಸಿ‌.ಅಶ್ವತ್ಥ ನಾರಾಯಣ, ಪದ್ಮಶ್ರೀ ಪುರಸ್ಕೃತ ಡಾ.ಸುಬ್ಬಯ್ಯ ಅಯ್ಯಪ್ಪನ್, ಎಬಿವಿಪಿ ರಾಷ್ಟೀಯ ಅಧ್ಯಕ್ಷ ಡಾ. ಛಗನ್ ಬಾಯ್ ಪಟೇಲ್, ಮೈಸೂರು ವಿವಿ ಕುಲಪತಿ ಪ್ರೊ.ಜಿ‌.ಹೇಮಂತ್ ಕುಮಾರ್ ಇದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ಆಪ್ಟಿಕಲ್ ಫೈಬರ್ ಸೇರಿ ಎಲ್ಲ ಅಳವಡಿಕೆಗಳು ಪೂರ್ಣಗೊಂಡ ಬಳಿಕವೇ ರಸ್ತೆಗಳ ನಿರ್ಮಾಣ ಕಾರ್ಯಕ್ಕೆ ಕ್ರಮ : ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.